ವಿಜಯಪುರದಲ್ಲಿ ಸಾಧನೆ ಮಾಡಿದ ಮಹಿಳೆ!! ಕೋಟ್ಯಂತರ ರೂಪಾಯಿ ವ್ಯವಾರ!! ಸಾಮಾನ್ಯ ಮಹಿಳೆ ಸಾಧಿಸಿದ ಅಸಾಮಾನ್ಯ ಕೆಲಸ!
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಇಂದು ನೀವೆಲ್ಲಾ ನಾಣ್ಣುಡಿ ಕೇಳಿರುತ್ತೀರಿ. ಆದರೆ ಇಂದು ಒಂದು ಹೆಣ್ಣು ಕಲಿತರೆ ಅದು ಹೇಗೆ ಶಾಲೆ ತೆರೆದಂತೆ ಆಗುತ್ತದೆ ಎಂಬುದಕ್ಕೆ ಉದಾಹರಣೆಯನ್ನು ನಾವು ನಿಮಗೆ ತಿಳಿಸುತ್ತೇವೆ. ಹೆಣ್ಣು ತನ್ನ ಜೀವನದಲ್ಲಿ ಏನೇನಾದರೂ ಸಾಧಿಸಬೇಕೆಂಬ ಛಲದಿಂದ ಮಾತ್ರ ಕಲಿಯುವುದಿಲ್ಲ. ಅವಳ ಶಿಕ್ಷಣ ತನ್ನ ತನ್ನ ಕುಟುಂಬದ ಹಾಗೂ ತನ್ನ ಸುತ್ತಮುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ. ಅವರಿಗೂ ಅದರಿಂದ ಸಹಕಾರಿಯಾಗುತ್ತದೆ. ಇದಕ್ಕೆ ಬೆಸ್ಟ್ ಉದಾಹರಣೆಯಾಗಿರುವುದು ಮಂಗಳ ಗುಡಿಮಠ ( Vijayapura ) ಎಂಬ ಮಹಿಳೆ.
ಕಷ್ಟದ ದಿನಗಳು ಮನುಷ್ಯನನ್ನು ಗಟ್ಟಿಯಾಗಿ ಮಾಡುತ್ತದೆ ಹೀಗೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದ ಮಂಗಳ ಅವರೂ ತಾಯಿಯ ಸಾವಿನಿಂದ ಸಂಪೂರ್ಣವಾಗಿ ಕುಗ್ಗಿ ಹೋದರು ಖಿನ್ನತೆಗೆ ಒಳಗಾಗಿ ಜೀವನವೇ ಮುಗಿದು ಹೋಯಿತು ಎನ್ನುವಷ್ಟು ಬೇಸತ್ತಿದ್ದರು. ಆದರೆ ಸೋಲನ್ನು ಒಪ್ಪಿಕೊಳ್ಳದೆ ಖಿನ್ನತೆಯಿಂದ ಹೊರಬರಲು ಮಂಗಳ ಆಯ್ದುಕೊಂಡಿದ್ದು ಕೆಲಸದಲ್ಲಿ ನಿರತರಾಗುವುದು. ಹೌದು ಕೆಲಸದಲ್ಲಿ ನಿರತರಾದರೆ ಖಿನ್ನತೆಯಿಂದ ಹೊರಗೆ ಬರಬಹುದು ಎಂದುಕೊಂಡು ಮಂಗಳ ಹೊಲಿಗೆ ವೃತ್ತಿ ಮಾಡಲು ಪ್ರಾರಂಭಿಸಿದರು.
ಮೊದಲಿಗೆ ಒಂದೇ ಮಷೀನ್ನಿಂದ ವೃತ್ತಿ ಪ್ರಾರಂಭಿಸಿದ ಮಂಗಳಾ ರವರ ಹತ್ತಿರ ಇಂದು 10 ಕ್ಕೂ ಹೆಚ್ಚು ಮಷೀನ್ ಗಳಿದ್ದು, ಹೊಲಿಗೆ ವೃತ್ತಿಯೊಂದಿಗೆ ಹೊಲಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಸದ್ಯಕ್ಕೆ 12 ಜನ ಹೆಣ್ಣು ಮಕ್ಕಳಿಗೆ ತರಬೇತಿ ನೀಡುತ್ತಿದ್ದು ಈಗಾಗಲೇ ನೂರಾರು ಮಹಿಳೆಯರು ಇವರಿಂದ ತರಬೇತಿ ಪಡೆದಿದ್ದಾರೆ.
ಮಂಗಳವಾರ ಗುರು ಹೊಲಿಗೆ ವೃತ್ತಿಯಲ್ಲಿ ಇಷ್ಟೊಂದು ಸಾಧನೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕೂಡ ಸಹಕಾರ ನೀಡಿದ್ದು, ಇಲಾಖೆಯಿಂದ ಕೈಗೊಳ್ಳಲಾಗುವ ಎಲ್ಲಾ ರೀತಿಯ ತರಬೇತಿ ಹಾಗೂ ಕೌಶಲ್ಯ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಅವಶ್ಯವಿರುವ ಎಲ್ಲಾ ರೀತಿಯ ವಿಧಗಳನ್ನು ಅಳವಡಿಸಿಕೊಂಡಿದ್ದಾರೆ.
ಕೇವಲ ವಿಜಯಪುರ ( Vijayapura ) ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಹಲವೆಡೆ ನಡೆಸಿದ ತರಬೇತಿ ಕ್ಯಾಂಪ್ ಗಳಲ್ಲಿ ಭಾಗವಹಿಸಿ ಮಸಾಲೆ ಸಿದ್ಧಪಡಿಸುವುದು, ಮೇಣದಬತ್ತಿ ತಯಾರಿಕೆ, ಹಪ್ಪಳ ತಯಾರಿಸುವುದು ಶಾವಿಗೆ ತಯಾರಿಸುವುದು ಹಾಗೂ ಊದುಬತ್ತಿ ತಯಾರಿಸುವ ತರಬೇತಿಯನ್ನು ಪಡೆದಿದ್ದು, ಸ್ತ್ರೀ ಶಕ್ತಿ ಸಂಘಗಳ ಮೂಲಕ ಇತರರಿಗೂ ಮಾಗ೯ದಶ೯ನ ನೀಡುತ್ತಿದ್ದಾರೆ.
ತಮ್ಮದೇ ಸಂಘ ಸ್ಥಾಪಿಸಿದ ಮಂಗಳಾ!
ತನಗೆ ಗೊತ್ತಿರುವ ವಿದ್ಯೆಗಳನ್ನು ಕೇವಲ ತರಬೇತಿ ನೀಡಿ ಕೈ ತೊಳೆದುಕೊಳ್ಳುವ ಬದಲಿಗೆ ಮಂಗಳಾ ಸಂಘಗಳನ್ನು ರಚಿಸಿ ಅವುಗಳ ಮೂಲಕ ಹೆಣ್ಣು ಮಕ್ಕಳಿಗೆ ಸಾಲವನ್ನು ನೀಡಿ ಅವರು ತಮ್ಮದೇ ಆದ ಉದ್ಯೋಗವನ್ನು ಕೈಗೊಳ್ಳಲು ಸಹಾಯ ಮಾಡುತ್ತಿದ್ದಾರೆ. ಹೌದು ಆರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ 180 ಸಂಘಗಳನ್ನು ಸ್ಥಾಪಿಸಿದ ಇವರು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದಾರೆ. ಸಾಲ ಕಲ್ಪಿಸುವ ಮೂಲಕ ಅವರು ಉದ್ಯಮ ಆರಂಭಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಂದ ಪ್ರತಿ ತಿಂಗಳು ಕೇವಲ 2 ರೂ. ಸಂಗ್ರಹಿಸುತ್ತಿದ್ದ ಮಂಗಳಾ ರವರು ಅದೇ ಹಣವನ್ನು ಮಹಿಳಾ ಸಂಘದ ಸದಸ್ಯರಿಗೆ ಸಾಲ ನೀಡುತ್ತಿದ್ದರು.
ನಂತರ 1999 ರಲ್ಲಿ ತಮ್ಮ ತಾಯಿಯ ಹೆಸರಿನಲ್ಲಿಯೇ ಈರಮ್ಮ ತಾಯಿ ಯುವತಿ ಮಂಡಳ ಎಂಬ ಸಂಘವನ್ನು ಸ್ಥಾಪಿಸಿ, ಸಂಘವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡಿದರು. ಹೀಗೆ ಸಂಘವು ಆಥಿ೯ಕವಾಗಿ ಸಫಲತೆ ಹೊಂದುತ್ತಾ ಹೋದಂತೆ ಸಂಘದ ಸದಸ್ಯರಿಗೆ ಕೊಡುವ ಸಾಲದ ಪ್ರಮಾಣವನ್ನು ಹೆಚ್ಚಿಸಿದರು. ಇದರಿಂದ ಸಂಘದ ಸದಸ್ಯರು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಯಿತು.
ಇಷ್ಟಕ್ಕೆ ಸುಮ್ಮನಾಗದ ಗುಡಿಮಠ ರವರು 2014 ರಲ್ಲಿ ಆಲಮೇಲ ಪಟ್ಟಣದಲ್ಲಿ 4 ಲಕ್ಷ ರೂ. ಬಂಡವಾಳದೊಂದಿಗೆ 400 ಶೇರ್ ಹೊಲ್ಡರ್ಸ್ಗಳನ್ನು ಹೊಂದಿರುವ ಪ್ರಗತಿ ವಿವಿದೋದ್ದೇಶಗಳ ಸಂಘ ಎಂಬ ಸಂಘವನ್ನು ಹುಟ್ಟುಹಾಕಿದ್ದು, ಈ ಸಂಘವು ಸರಕಾರದ ವಿವಿಧ ಯೋಜನೆಗಳಡಿ ಮಹಿಳೆಯರಿಗೆ ನೀಡಲಾಗುವ ಸಾಲದ ವಿವರವನ್ನು ನೀಡುವುದು ಮಾತ್ರವಲ್ಲದೇ ಮಹಿಳೆಯರಿಗೆ ಆ ಸಾಲ ಸಿಗುವಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಸಂಘದಿಂದಲೇ ಮಹಿಳೆಯರಿಗೆ ಸಿಗಬಹುದಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಹೇಗೆ ಸರ್ಕಾರ ಯೋಜನೆಗಳ ಸೌಲತ್ತುಗಳನ್ನು ಮಹಿಳೆಯರಿಗೆ ಕೊಡಿಸುತ್ತಿದ್ದಾರೆ
4 ಕೋಟಿ ಬಂಡವಾಳದ ಬ್ಯಾಂಕ್!
ಆರಂಭದಲ್ಲಿ ಕೇವಲ 15 ಸಾವಿರ ರೂ. ಸಾಲ ನೀಡುತ್ತಿದ್ದ ಇವರ ಬ್ಯಾಂಕ್ ಇದೀಗ ಕೇವಲ 1.5 ರೂ. ಬಡ್ಡಿ ದರದಲ್ಲಿ 2 ಲಕ್ಷದವರೆಗೆ ಸಂಘದ ಸದಸ್ಯರಿಗೆ ಸಾಲ ನೀಡುತ್ತಿದ್ದು, ಸುಮಾರು 4 ಕೋಟಿ ರೂ. ಬಂಡವಾಳ ಹೊಂದಿದ್ದು, ಇವರ ಸಂಘಗಳಲ್ಲಿ ತಯಾರಿಸಲಾಗುವ ಹಪ್ಪಳ, ಶಾವಿಗೆ, ಮೇಣದಬತ್ತಿ ಹಾಗೂ ಊದುಬತ್ತಿಗಳನ್ನು ಮಾರಾಟ ಮಾಡಿಯೂ ಕೂಡ ಅಪಾರ ಲಾಭ ಗಳಿಸುತ್ತಿದ್ದಾರೆ.
ಮಾರಾಟ ಮಳಿಗೆ (stall) ಸ್ಥಾಪನೆ!
ಅಷ್ಟೇ ಅಲ್ಲದೇ ದೆಹಲಿ, ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ತಮ್ಮ ಸಂಘದ ಹಪ್ಪಳ, ಶಾವಿಗೆ, ಮೇಣದಬತ್ತಿ ಹಾಗೂ ಊದುಬತ್ತಿಗಳನ್ನು ಮಾರಾಟ. ಮಾಡಲು ಸ್ಟಾಲ್ ಗಳನ್ನು ತೆರೆದಿದ್ದು, ಇದರಿಂದ ಹಲವು ಮಹಿಳೆಯರಿಗೆ ಉದ್ಯೋಗವು ದೊರಕಿದೆ.
ಮಂಗಳವಾರ ಕೊಡುಗೆ ಆರ್ಥಿಕತೆಗೆ ಹಾಗೂ ಮಹಿಳೆಯರ ಸಬಲತೆಗೆ ಮಾತ್ರವಲ್ಲದೆ ಪರಿಸರಕ್ಕೂ ಕೂಡ ಅಷ್ಟೇ ಮಹತ್ವ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಭೂಮಿಯ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದ್ದು ಅಂತರ್ಜಲ ಕಾಪಾಡುವಲ್ಲಿ ಮಂಗಳಾರವರು ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಕನಸು ತನ್ನ ಪ್ರದೇಶಗಳಲ್ಲಿ ಮಳೆ ಹಾಗೂ ಬೋರ್ವೆಲ್ ಹರಿದು ವ್ಯರ್ಥವಾಗದಂತೆ ಇಂಗು ಗುಂಡಿಗಳನ್ನು ತೆಗೆಸಿದ್ದು ಇದರಿಂದ ನೀರು ಮಣ್ಣಿನಲ್ಲಿ ಇಂಗಿಕೊಂಡು ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ತಾವು ಮಾಡುವುದು ಮಾತ್ರವಲ್ಲದೆ ಗ್ರಾಮದ ಇತರರಿಗೂ ಈ ಬಗ್ಗೆ ತಿಳಿ ಹೇಳುತ್ತಿದ್ದು ಎಲ್ಲರೂ ಕೂಡ ಅಂತರ್ಜಲ ಮಟ್ಟ ಹೆಚ್ಚಿಸಲು ಕೊಡುಗೆ ನೀಡುವಂತೆ ಮಾಡುತ್ತಿದ್ದಾರೆ.
ಇವರಿಗೆ ಒದಗಿಬಂದ ಪ್ರಶಸ್ತಿಗಳು:-
*2001 ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಸಮಿತಿ ಸದಸ್ಯರಗಿದ್ದರು.
* 1999 ರಲ್ಲಿ ಕೃಷಿ ಇಲಾಖೆಯ ಮಹಿಳಾ ಅಧಿಕಾರ ಸ್ವಾವಲಂಬನೆ ಯೊಜನೆ ಸದಸ್ಯರಾಗಿ ನೇಮಕ *ಹಲವು ಇಲಾಖೆಗಳಿಂದ ಸನ್ಮಾನ.
*2004 ರಲ್ಲಿ ಸ್ತ್ರೀ ಶಕ್ತಿ ಸಾಧನೆ ಸಮಾಜ ಸೇವಾ ಪ್ರಶಸ್ತಿ,
*2011 ರಲ್ಲಿ ಸುವರ್ಣ ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಾಣಾ ಸಮಿತಿ ಆದರ್ಶ ಮಹಿಳಾ ರತ್ನ ಪ್ರಶಸ್ತಿ,
* 2021ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ *2006ರಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ವಿಜಯಪುರದಿಂದ ಸನ್ಮಾನ
*2010 ಮಹಿಳಾ ಸಬಲೀಕರಣ ಮತ್ತು ಒಗ್ಗೂಡಿಕೆ ದೆಹಲಿ ಅವರಿಂದ ಸನ್ಮಾನ
* 2012ರಲ್ಲಿ ರಾಮಪುರ ಸೇವಾ ಸಮಿತಿಯಿಂದ ಸನ್ಮಾನ ಪಡೆದಿದ್ದಾರೆ.
ತನ್ನ ತಂದೆ ತಾಯಿಯನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಹೊಲಿಗೆ ಆರಂಭಿಸಿದ ಮಹಿಳೆ ಇಂದು ಹಲವಾರು ಮಹಿಳಾ ಸಂಘಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಫಲರಾಗಲು ಶ್ರಮಿಸಿದ್ದು, ಅದರಿಂದ ಹಲವಾರು ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗುತ್ತದೆ ಎಂದು ಮಂಗಳಾರವರು ಹೇಳುತ್ತಾರೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ