UPSC recruitment:: CAPF ನಲ್ಲಿ ನಡೆಯುತ್ತಿದೆ ಭಜ೯ರಿ ನೇಮಕಾತಿ! ಪದವಿ ಮುಗಿದವರು ಅಜಿ೯ ಸಲ್ಲಿಸಿ! 506 ಹುದ್ದೆಗಳಿಗೆ ನೇಮಕಾತಿ!
ಯುಪಿಎಸ್ಸಿ ಕಡೆಯಿಂದ ಮತ್ತೊಂದು ಭರ್ಜರಿ ನೇಮಕಾತಿ ನಡೆಯುತ್ತಿದ್ದು ಅದು ಸೂಚನೆ ಹೊರಬಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಯುಪಿಎಸ್ ಈ ಬಾರಿ ಅರ್ಜಿ ಆಹ್ವಾನಿಸಿದ್ದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
CAPF ನೇಮಕಾತಿ ಮಾಡುತ್ತಿರುವ ಹುದ್ದೆಗಳು!
ಒಟ್ಟು 506 ಹುದ್ದೆಗಳಿಗೆ ಯುಪಿಎಸ್ಸಿಯು ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. ಅದರಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ವಿವಿಧ ಭಾಗಗಳಲ್ಲಿ ಹುದ್ದೆಗಳು ವಿಂಗಡಿಸಲಾಗಿದೆ. ವಿವರ ಕೆಳಗಿನಂತಿದೆ
*ಗಡಿ ಭದ್ರತಾ ಪಡೆ (BSF)-186
*ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) – 120
*ಕೇಂದ್ರೀಯ ಕೈಗಾರಿಕಾ ಭದ್ರತಾ ವಡೆ (CISF) – 100
*ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) – 58
*ಸಶಸ್ತ್ರ ಸೀಮಾ ಬಲ (SSB) – 42
ಒಟ್ಟು – 506 ಹುದ್ದೆಗಳು
ಸಿಎಪಿಎಫ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು!
* ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ವಯೋಮಿತಿ!
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷದವರಾಗಿರಬೇಕು ಯುಪಿಎಸ್‌ಸಿ ನಿಯಮದನ್ವಯ ಆಯವರ್ಗದ ಅಭ್ಯರ್ಥಿಗಳಿಗೆ ವಯೋಮಾನ ಸಡಲಿಕೆ ಇರುತ್ತದೆ. ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ.
CAPF ಅರ್ಜಿ ಸಲ್ಲಿಸಲು ಶುಲ್ಕ!
CAPF ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
* ಉಳಿದ ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂಪಾಯಿ ಶುಲ್ಕವಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
CAPF ಹುದ್ದೆಗಳ ನೇಮಕಾತಿಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಮೇ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
CAPF ಅರ್ಜಿ ಸಲ್ಲಿಸುವುದು ಹೇಗೆ?
ಯುಪಿಎಸ್‌ಸಿ ನೇಮಕಾತಿಯ ಅಧಿಕೃತ ಜಾಲತಾಣವಾದ https://upsconline.nic.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಕೆಳಗೆ ಅಧಿಸೂಚನೆಯನ್ನು ನೀಡಲಾಗಿದ್ದು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಈ ಮೇಲ್ಕಂಡ ಜಾಲತಾಣದಲ್ಲಿ ಮಾಹಿತಿಯನ್ನು ಪಡೆಯಿರಿ
ಪ್ರಮುಖ ಲಿಂಕ್ ಗಳು:-
ಅಧಿಸೂಚನೆ:- ಇಲ್ಲಿ ಕ್ಲಿಕ್ ಮಾಡಿ
CAPF_AC_Exam_2024_ExamNotif_Eng_24042024
ಜಾಲತಾಣ:-https://upsconline.nic.in/
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ