Employment news::ವಿಧಾನಸಭಾ ಸಚಿವಾಲಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಾರಂಭ! ಡಿಗ್ರಿ ಮುಗಿದವರು ಅಪ್ಲೈ ಮಾಡಬಹುದು!
ಸಕಾ೯ರಿ ನೌಕರಿ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ದೊರೆತಿದ್ದು, ಕರ್ನಾಟಕ ವಿಧಾನಸಭಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಧಿಸೂಚನೆ ಪ್ರಕಟಗೊಂಡಿದೆ.
ಹೌದು ಕರ್ನಾಟಕ ವಿಧಾನಸಭಾ ಸಚಿವಾಲಯದಲ್ಲಿ ಖಾಲಿ ಇರುವ ವರದಿಗಾರರ ಹುದ್ದೆಗಳ ನೇಮಕಾತಿಗೆ ಚಾಲನೆ ದೊರೆತಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ವರದಿಗಾರರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಖಾಲಿ ಹುದ್ದೆಗಳ(Posts) ವಿವರ:-
ಕನ್ನಡ ಹಾಗೂ ಇಂಗ್ಲಿಷ್ ವರದಿಗಾರರು-06 ಹುದ್ದೆ
ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅಹ೯ತೆ:-
* ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
*ಕನ್ನಡ ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಾ೯ಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆಸುವ ಪ್ರಥಮ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗು ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀಣ೯ರಾಗಿರಬೇಕು.
*ಇಂಗ್ಲಿಷ್ ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಾ೯ಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆಸುವ ಪ್ರಥಮ ದರ್ಜೆಯ ಇಂಗ್ಲಿಷ್ ಶೀಘ್ರಲಿಪಿ ಹಾಗು ಇಂಗ್ಲಿಷ್ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತೀಣ೯ರಾಗಿರಬೇಕು.
ವೇತನ ಶ್ರೇಣಿ:-
ಮಾಸಿಕ ವೇತನ 37,900-70850 ರೂ.ವರೆಗೆ
ವಯೋಮಿತಿ:-
ಕನಿಷ್ಟ 18 ವಷ೯
ಗರಿಷ್ಟ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
*ಸಾಮಾನ್ಯ ವರ್ಗ: 35 ವರ್ಷ
*ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ : 38 ವರ್ಷ
*ಪ.ಜಾ./ಪ.ಪಂ./ಪ್ರವರ್ಗ-1 : 40 ವರ್ಷ
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳು- 500 ರೂಪಾಯಿ
*ಪ.ಜಾ./ಪ.ಪಂ./ಪ್ರವರ್ಗ-1- ಅರ್ಜಿ ಶುಲ್ಕವಿಲ್ಲ.
ಅಜಿ೯ ಸಲ್ಲಿಸುವ ಕೊನೆಯ ದಿನಾಂಕ:-
ಅಜಿ೯ ಸಲ್ಲಿಸಲು 30 ಏಪ್ರಿಲ್ 2024ರ ಕೊನೆಯ ದಿನಾಂಕವಾಗಿದ್ದು, ಈ ದಿನಾಂಕದ ಒಳಗೆ ಅಜಿ೯ಯನ್ನು ಅಧಿಕೃತ ವೆಬ್ಸೈಟ್ ಮೂಲಕ ಪಡೆದು ಸಂಬಂಧಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಅಜಿ೯ ಕಳುಹಿಸುವ ವಿಳಾಸ:
ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:5074, ಮೊದಲನೆ ಮಹಡಿ, ವಿಧಾನ ಸೌಧ, ಬೆಂಗಳೂರು-560 001.
ಅಜಿ೯ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ
https://kla.kar.nic.in/assembly/career/career.htm
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ