ಹಕ್ಕಿ ಪಕ್ಷಿಗಳಿಂದ ಬೆಳೆಗಳನ್ನು ಕಾಪಾಡುವುದು ಈಗ ಸುಲಭ..!!!! ಈ ರೈತನ ಟೆಕ್ನಿಕ್ ನೋಡಿ…!!!!
ಕೃಷಿ ಎಂದರೆ ಹಾವು-ಏಣಿ ಆಟ ಇದ್ದಂತೆ ಏಕೇಂದರೆ ರೈತರಿಗೆ ದಿನಕ್ಕೊಂದು ಹೊಸ ತೊಂದರೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಬೆಳೆಗಳಿಗೆ ರೋಗ, ನೆರೆಹಾವಳಿ, ಬರಗಾಲ, ಪ್ರಾಣಿಗಳ ಕಾಟ, ಇಳುವರಿ ಕಡಿಮೆ ಬರುವುದು ಹೀಗೆ ಹಲವಾರು ತೊಂದರೆಗಳ ಮಧ್ಯೆ ಇನ್ನೇನು ಫಸಲು ಚೆನ್ನಾಗಿ ಬಂದು ಕೈ ಸೇರುವ ಸಮಯದಲ್ಲಿ ಹಕ್ಕಿಪಕ್ಷಿಗಳ ಕಾಟ ಪ್ರಾರಂಭವಾಗುತ್ತದೆ.
ಬೆಳೆದು ನಿಂತ ಧಾನ್ಯಗಳನ್ನು ಹಕ್ಕಿಪಕ್ಷಿಗಳಿಂದ ಕಾಪಾಡುವುದು ರೈತನಿಗೆ ಇರುವ ಇನ್ನೊಂದು ಬಹುದೊಡ್ಡ ಸವಾಲು. ಇದಕ್ಕಾಗಿ ರೈತರು ಹಲವಾರು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ಅಂತಹುದೇ ಒಂದು ಉಪಾಯದ ಬಗ್ಗೆ ನಾವು ಇಂದು ಹೇಳುತ್ತಿದ್ದೇವೆ.
ಈ ಹಕ್ಕಿಪಕ್ಷಿಗಳಿಂದ ಧಾನ್ಯಗಳನ್ನು ಕಾಪಾಡಲು ಮೈಸೂರಿನ ಕೃಷ್ಣರಾಜನಗರ ತಾಲೂಕಿನ ರೈತ ವಿನೂತನ ಪ್ರಯೋಗ ಮಾಡಿದ್ದಾರೆ. ಅಲ್ಲದೇ ಅದರಲ್ಲಿ ಯಶಸ್ವಿಯು ಆಗಿದ್ದಾನೆ .
ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ಕೃಷ್ಣರಾಜನಗರ ತಾಲೂಕಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಪ್ರದೇಶಗಳಲ್ಲಿ ಭತ್ತದ ನಾಟಿ ಕಾರ್ಯ ಮುಗಿದು, ಪೈರುಗಳಲ್ಲಿ ಹಾಲ್ತುಂಬಿದ ತೆನೆ ಬಾಗಿ ನಿಂತಿದ್ದು, ಭತ್ತದ ಹಾಲು ಹೀರಲು ಹಲವು ಬಗೆಯ ಪಕ್ಷಿಗಳು ಹೊಲಗಳ ಮೇಲೆ ದಾಳಿ ನಡೆಸುತ್ತಿವೆ.
ಪಕ್ಷಿಗಳಿಂದ ತಮ್ಮ ಬೆಳೆ ರಕ್ಷಣೆಗಾಗಿ ರೈತರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಹೊಲಗಳಲ್ಲಿ ಕಾಯುತ್ತಾ ಕೂತುಕೊಳ್ಳುವ ಪರಿಸ್ಥಿತಿ ಬಂದಿದ್ದು, ಇದರಿಂದ ಪರದಾಡುತ್ತಿದ್ದ ರೈತ ವಿಶಿಷ್ಟ ಪ್ರಯೋಗ ಮಾಡಿ ಬೆಳೆ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಅದೇನೆಂದರೆ ಈ ರೈತ ತನ್ನ ಹೊಲದಲ್ಲಿ ಅಲ್ಲಲ್ಲಿ ಬಿಯರ್ ಬಾಟಲಿಗಳನ್ನು ನೇತುಹಾಕಿದ್ದು, ಅವುಗಳ ಸಮೀಪವೇ ಕಲ್ಲನ್ನು ಕಟ್ಟಿ ಇಳಿಬಿಟ್ಟಿರುತ್ತಾರೆ. ಜೋರಾಗಿ ಗಾಳಿ ಬೀಸಿದಾಗ ನೇತುಬಿದ್ದಿರುವ ಕಲ್ಲು ಬಿಯರ್ ಬಾಟಲಿಗೆ ಹೊಡೆದು ಶಬ್ದ ಬರುತ್ತದೆ. ಹೀಗೆ ಜೋರಾಗಿ ಶಬ್ಧ ಬಂದರೆ ಹಕ್ಕಿಗಳು ಹೆದರಿ ಹಾರಿಹೋಗುತ್ತವೆ.
ಗುಜರಿ ಬದಲು ಹೊಲ-ಗದ್ದೆಗಳಲ್ಲಿ ಬಿಯರ್ ಬಾಟಲಿಯ ಉಪಯೋಗ..!!!
ಬಿಯರ್ ಬಾಟಲಿಗಳನ್ನು ಬಳಸಿದ ನಂತರ ಗುಜರಿ ಅಂಗಡಿಗೆ ಹಾಕಿಬಿಡುತ್ತಾರೆ. ಆದರೆ ನಾವು ಈಗ ಹೇಳಿರುವ ಉಪಾಯ ತಿಳಿದ ಮೇಲೆ ಯಾವ ರೈತನು ಬಿಯರ್ ಬಾಟಲಿಗಳನ್ನು ಗುಜರಿಗೆ ಹಾಕಲು ಸಾಧ್ಯವಿಲ್ಲ.
ಏಕೆಂದರೆ ಕಡಿಮೆ ಖಚಿ೯ನಲ್ಲಿ ಹಾಗೂ ಸುಲಭವಾಗಿ ಹಕ್ಕಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ತಯಾರು ಮಾಡುವುದು ಸಹ ಸುಲಭವಾಗಿದೆ.
ಬಿಯರ್ ಬಾಟಲಿಗೆ ಸುಮಾರು 50 ಗ್ರಾಂ ತೂಕದ ಕಬ್ಬಿಣದ ಬೋಲ್ಟ್ /ಕಲ್ಲುಗಳನ್ನು ಬೈಂಡಿಂಗ್ ವೈರ್ ಅಥವಾ ದಾರದ ಸಹಾಯದಿಂದ ಭತ್ತದ ಗದ್ದೆಗಳಲ್ಲಿ ಗೂಟಕ್ಕೆ ತೂಗು ಹಾಕಬೇಕು.
ಬೀಸುವ ಗಾಳಿಗೆ ಅದು ತೂಗಾಡಿ ಬಡಿದಾಡಿಕೊಂಡಾಗ ಉಂಟಾಗುವ ಶಬ್ದಕ್ಕೆ ಹೆದರಿದ ಪಕ್ಷಿಗಳು ಭತ್ತದ ಪೈರು , ಜೋಳ ಇನ್ನಿತರ ಬೆಳೆಗಳ ಹತ್ತಿರ ಬಾರದೇ, ಹಾರಿಹೋಗುತ್ತವೆ.
ಬೇಸಿಗೆಯಲ್ಲಿ ಪಕ್ಷಿಗಳ ವಿಪರೀತ ಹಾವಳಿ..!!!
ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ಭತ್ತ, ರಾಗಿ, ಇನ್ನಿತರ ಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಪಕ್ಷಿಗಳಿಗೆ ಆಹಾರ ಸಮಸ್ಯೆ ಇರುವುದಿಲ್ಲ. ಆದರೆ, ಬೇಸಿಗೆಯಲ್ಲಿ ಮಾತ್ರ ನೀರಿನ ಅಭಾವ ಉಂಟಾಗುವುದರಿಂದ ಭತ್ತ ಅಥವಾ ಇನ್ನಿತರ ಬೆಳೆಗಳನ್ನು ಬೆಳೆಯಲು ಹೆಚ್ಚಿನ ರೈತರು ಆಸಕ್ತಿ ತೋರುವುದಿಲ್ಲ.
ಆದ್ದರಿಂದ ಖಾಲಿ ಇರುವ ಹೊಲ-ಗದ್ದೆಗಳಲ್ಲಿ ಪಕ್ಷಿಗಳಿಗೆ ಏನೂ ಆಹಾರ ಸಿಗದೇ ಇರುವುದರಿಂದ ಬೆಳೆ ಇರುವೆಡೆ ಪಕ್ಷಿಗಳು ಹುಡುಕಿಕೊಂಡು ಬರುತ್ತವೆ. ಒಮ್ಮೆಲೇ ಹೀಗೆ ನೂರಾರು ಹಕ್ಕಿಗಳು ಒಂದೇ ಕಡೆ ಭತ್ತದ ಗದ್ದೆಗಳಿಗೆ ದಾಳಿ ನಡೆಸಿ ತೆನೆಯಲ್ಲಿನ ಹಾಲು ಹೀರಿಕೊಳ್ಳುವುದರಿಂದ ಭತ್ತದ ತೆನೆ ಜೊಳ್ಳಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ.
ರೈತರ ಮಾತು
ಬೇಸಿಗೆಯಲ್ಲಿ ಹೆಚ್ಚು ಆಹಾರ ಸಿಗದೇ ಇರುವ ಕಾರಣದಿಂದ ಹಲವು ಜಾತಿಯ ಪಕ್ಷಿಗಳು ಭತ್ತ, ರಾಗಿ , ಜೋಳ ಇನ್ನಿತರ ಬೆಳೆ ತಿನ್ನಲು ಹೊಲ-ಗದ್ದೆಗಳಿಗೆ ದಾಳಿ ಮಾಡುತ್ತವೆ. ಕಾದು ಕುಳಿತು ಪಕ್ಷಿಗಳನ್ನು ಓಡಿಸುವುದು ತುಂಬಾ ಕಷ್ಟ ಕೆಲಸ. ಆದ್ದರಿಂದ ಈ ಉಪಾಯ ಮಾಡಿದ್ದು, ಖಾಲಿ ಬಿಯರ್ ಬಾಟಲಿಗಳನ್ನು ಯಾವುದೇ ಖರ್ಚು ಇಲ್ಲದೆ ತಂದು ಜಮೀನುಗಳಲ್ಲಿ ತೂಗು ಹಾಕಿದ್ದೇವೆ. ಇದು ಹೊರ ಸೂಸುವ ಶಬ್ದದಿಂದ ಸುಮಾರು ಅರ್ಧ ಕಿ.ಮೀ.ವರೆಗೂ ಯಾವುದೇ ಹಕ್ಕಿಗಳೂ ಸುಳಿಯುವುದಿಲ್ಲ ಎಂದು ರೈತ ತಮ್ಮ ಉಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ರೈತರ ವಿವರ:
ಸತೀಶ್ ರೈತ,
ಬೇವಿನಹಳ್ಳಿ,
ಕೆ.ಆರ್.ನಗರ ತಾಲೂಕು
ಸೂಚನೆ: ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಫೋನ್ ನಂಬರ್ ಹಂಚಿಕೊಂಡಿಲ್ಲ. ಯಾರಿಗಾದರೂ ಮಾಹಿತಿ ಬೇಕಾದಲ್ಲಿ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಧನ್ಯವಾದಗಳು
****** ಅಂತ್ಯ ******
75000 ರೈತರ ಪಿ.ಎಂ. ಕಿಸಾನ್ ಇ-ಕೆವೈಸಿ ನೋಂದಣಿ ಬಾಕಿ ಮಾಡಿಸದಿದ್ದಲ್ಲಿ ರೈತರಿಗೆ ಸಂಕಷ್ಟ..!!!! ಕೂಡಲೇ ಚೆಕ್ ಮಾಡಿಸಿ..!!!!! ಇ-ಕೆವೈಸಿ ಮಾಡಿಸಿ…!!!!
ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಮಂಡಳಿಯಿಂದ 1000 ರೂ ಪಿಂಚಣಿ..!!! ಕೂಡಲೇ ಅರ್ಜಿ ಸಲ್ಲಿಸಿ..!!!
ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಪಾವತಿ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?
ಅಂತರ್ಜಲ ಮಟ್ಟ ಹೆಚ್ಚಿಸಲು ಐದು ಸೂತ್ರಗಳು…!!!!! ಬೋರ್ವೆಲ್ ಡ್ರೈ( borewell dry) ಆಗುವುದನ್ನು ತಡೆಯಿರಿ…?????
ಸಾವಯುವ ಇಂಜಿನಿಯರ್ ರವರ ಜೀವಾಮೃತ ಪ್ರಯೋಗದಿಂದ ಯಾವುದೇ ಗೊಬ್ಬರ ಹಾಗೂ ಔಷಧಿ ಇಲ್ಲದೆ ತೋಟಗಳಿಗೆ ರೋಗಕ್ಕೆ ಪರಿಹಾರ…!!!!!!
ಶ್ರೀಮಂತರು ಕೃಷಿ ಭೂಮಿಯನ್ನು ಕೊಂಡುಕೊಳ್ಳುವುದು ಏಕೆ…!!!
ಕೃಷಿ ಉಪಕರಣಗಳ ಅಧಿಕೃತ ಮಾರಾಟಗಾರರಿಂದ..!!!! ಯಂತ್ರೋಪಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ..!!!!
ಪಿಎಂ ಕಿಸಾನ್ನಲ್ಲಿ ಹೊಸ ಅಪ್ಡೇಟ್…!!! ಅನರ್ಹರಿಗೆ ಸರ್ಕಾರದಿಂದ ಒಂದು ಅವಕಾಶ…!!!
ಮೊಬೈಲ್ ನಲ್ಲಿ ಸ್ವಾವಲಂಭಿ ಆ್ಯಪ್ ಮೂಲಕ ಸ್ವಯಂ ಸರ್ವೆ ಮತ್ತು ಪೋಡಿ ನೀವೆ ಮಾಡಿ..!!!!!
ಜಮೀನು ಹೊಂದಿರುವ ರೈತರಿಗೆ…!!!! ಪ್ರತಿ ಎಕರೆಗೆ 1 ಲಕ್ಷ ಹಣ ಸಿಗುತ್ತದೆ..!!!
ಕುರಿ ಕೋಳಿ ಹಾಗೂ ಮೇಕೆಗಳಿಗೆ ನೀಡುವ ಔಷಧಿಗಳ ಯಾವ್ಯಾವು….!!!! ಮನುಷ್ಯನ ಆರೋಗ್ಯದ ಮೇಲೆ ಇದರಿಂದಾಗುವ ಪರಿಣಾಮವೇನು..!!!!
ನಿಮ್ಮ ತೋಟಕ್ಕೆ ಬೋರ್ವೆಲ್ ತೆಗೆಸುವ ಮುನ್ನ ಈ ವಿಚಾರಗಳನ್ನು ತಿಳಿದುಕೊಳ್ಳಿ , 5 ಬಗೆಯ ಬೋರ್ವೆಲ್ ಮಷೀನ್…!!
https://vkkrushi.com/government-schemes-agricultural-information-innovative-organic-farming-practi/
ಉಚಿತವಾಗಿ ಆಧಾರ್ ತಿದ್ದುಪಡಿ ಮಾಡಿಕೊಳ್ಳಬಹುದು..!!!! ನಿಮ್ಮ ಮೊಬೈಲ್ ನಲ್ಲೆ ಮಾಡಿಕೊಳ್ಳಿ…!!!!! ಯಾವುದೇ ಶುಲ್ಕ ಇಲ್ಲ..!!!!!
ಬೆಳೆ ಹಾನಿ ಪರಿಹಾರ ಜಮವಾಗಿದೆ ಚೆಕ್ ಮಾಡಿಕೊಳ್ಳಿ…..!!!
7ನೇ ವೇತನ ಆಯೋಗದ ವರದಿಯಂತೆ ನೌಕರರಿಗೆ ಸಿಗಲಿದೆ ಬರೋಬ್ಬರಿ 27000 ರೂಪಾಯಿ ಹೆಚ್ಚಿನ ವೇತನ…!!!!
ಮಾವು ಬೆಳಗಾರರಿಗೆ ಸಂತೋಷ ಸುದ್ದಿ ನೀಡಿದ ಸರ್ಕಾರ….!!!!ದೇಶದಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾಗಿದೆ…!!!!
ನ್ಯಾಯಬೆಲೆ ಅಂಗಡಿಗಳಿಂದ ಮೋಸ, ಎಚ್ಚರ…!!
ಯಾವುದೇ ಕಚೇರಿಗೂ ಹೋಗದೆ 2 ನಿಮಿಷದಲ್ಲಿ ಮೊಬೈಲ್ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವ ವಿಧಾನ…!!!!!
ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ರೇಷನ್..!!!!! ಈ ಪಟ್ಟಿಯಲ್ಲಿ ಇದ್ದವರಿಗೆ ಮಾತ್ರ ಉಚಿತ ರೇಷನ್ ಪಡೆಯುವ ಭಾಗ್ಯ..!!!
ಈ ವರ್ಷವೂ ರೈತರಿಗೆ ಕೈ ಕೊಟ್ಟ ಮಾವು..!!”” ಕೀಟಭಾದೆ ಹಾಗೂ ಬಿಸಿಲಿನಿಂದ ಮಾವು!!! ಪರಿಹಾರ ಏನು ?????
ಮನೆಯಲ್ಲಿಯೇ ಕುಳಿತು ನಿಮ್ಮ ಭೂಮಿಯ ಎಲ್ಲಾ ಭೂಮಿ ದಾಖಲೆಗಳು ಮತ್ತು ಆಕಾರ ಡೌನ್ಲೋಡ್ ಮಾಡಿಕೊಳ್ಳಬಹುದು…!!!
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ