ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಹುಳು ಮನೆ ನಿರ್ಮಾಣ ಹೇಗೆ..?? ಮತ್ತು ವಿಶೇಷತೆ ಏನು..???
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ. ರೇಷ್ಮೆ ಹುಳು ತನ್ನ ಜೀವನ ಚಕ್ರದಲ್ಲಿ ಸುಮಾರು 24-28 ದಿನಗಳವರೆಗೆ ಹುಳುವಿನ ಹಂತದಲ್ಲಿರುತ್ತದೆ. ಮೂರನೇ ಅಥವ ನಾಲ್ಕನೇ ಹಂತದಿಂದ ಗೂಡು ಕಟ್ಟುವವರೆಗೆ ಪ್ರೌಢ ಹುಳು ಸಾಕಾಣಿಕೆ ಎಂದು ಕರೆಯುತ್ತಾರೆ.
ಪ್ರೌಢ ಹುಳುವಿನ ಹಂತದಲ್ಲಿ ರೇಷ್ಮೆ ಹುಳುಗಳು ಶೇ. 94 ರಷ್ಟು ಸೊಪ್ಪನ್ನು ತಿಂದು, 133 ಪಟ್ಟು ದೇಹ ಗಾತ್ರದಲ್ಲಿ ಬೆಳೆದು, 125 ಪಟ್ಟು ದೇಹದ ತೂಕವನ್ನು ಹೆಚ್ಚಿಸಿ ಸುಮಾರು 1000 ಪಟ್ಟು ರೇಷ್ಮೆ ಗ್ರಂಥಿಗಳ ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ.
ಹೆಚ್ಚಿನ ಉಷ್ಣಾಂಶ, ಶೈತ್ಯಾಂಶ ಹಾಗೂ ರೋಗಗಳಿಗೆ ಪ್ರೌಢ ಹುಳುಗಳು ಸೂಕ್ಷ್ಮವಾಗಿ ಸ್ಪಂದಿಸುವುದರಿಂದ ವೈಜ್ನಾನಿಕ ವಿಧಾನ ಮತ್ತು ಕುಶಲತೆಯಿಂದ ಸಾಕಾಣಿಕೆಯನ್ನು ಮಾಡಿ ಅಧಿಕ ಗೂಡಿನ ಇಳುವರಿ ಪಡೆಯಬಹುದು.
ಹುಳು ಸಾಕಾಣಿಕೆ ಮನೆ ಹೇಗಿರಬೇಕು??
* ಉತ್ತಮ ಗಾಳಿ ಸಂಚಾರ, ಬೆಳಕು ಮತ್ತು ಸ್ಥಳಾವಕಾಶ ಇರುವ ಪ್ರತ್ಯೇಕ ಹುಳು ಸಾಕಾಣಿಕೆ ಮನೆಯನ್ನು ಪ್ರೌಢ ಹುಳುಗಳಿಗೆ ನಿರ್ಮಿಸುವುದು ಅತ್ಯಾವಶ್ಯಕ. ಮನೆಯು ಅಗತ್ಯಕ್ಕೆ ತಕ್ಕಂತೆ ಎತ್ತರವಿದ್ದು, ಅಪೇಕ್ಷಿತ ಉಷ್ಣಾಂಶ ಮತ್ತು ಶೈತ್ಯಾಂಶವನ್ನು ನಿರ್ವಹಿಸುವಂತಿರಬೇಕು. ಹುಳು ಸಾಕಾಣಿಕೆ ಮನೆಯು ಪರಿಣಾಮಕಾರಿ ಸೋಂಕು ನಿವಾರಣೆ ಮತ್ತು ಶುಚಿತ್ವ ಕಾಪಾಡಲು ಸೂಕ್ತವಾಗಿದ್ದು,
ಪ್ರತ್ಯೇಕ ಸೊಪ್ಪು ಸಂಗ್ರಹಣಾ ಕೊಠಡಿ ಹಾಗೂ ಊಜಿ ನೊಣ ಒಳ ಪ್ರವೇಶಿಸದಂತೆ ನಿಯಂತ್ರಿಸಲು ಉಪ ಕೊಠಡಿ ಹೊಂದಿರುವುದು ಉತ್ತಮ.
ಹುಳು ಸಾಕಾಣಿಕೆ ಮನೆಯು ಪೂರ್ವ-ಪಶ್ಚಿಮ ಮುಖವಾಗಿರಬೇಕು. ಉತ್ತರ-ದಕ್ಷಿಣಕ್ಕೆ ಕಿಟಕಿ ಬಾಗಿಲುಗಳು ಇರಬೇಕು. ಊಜಿ ನಿಯಂತ್ರಣಕ್ಕೆ ಕಿಟಕಿ ಬಾಗಿಲುಗಳಿಗೆ ತಂತಿ ಜಾಲರಿಯನ್ನು ಅಳವಡಿಸಿರಬೇಕು. ಗಾಳಿ, ಬೆಳಕು ಸರಾಗವಾಗಿ ಚಲಿಸಲು ಎದುರು ಬದುರಾಗಿ ಕಿಟಕಿಗಳಿರಬೇಕು. ಜೊತೆಗೆ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಗವಾಕ್ಷಿಗಳನ್ನು ಇಡಬೇಕು. ಒಂದು ಮೊಟ್ಟೆಯ ಹುಳು ಸಾಕಣಿಕೆಗೆ ಸುಮಾರು 8 ಚದರ ಅಡಿ ಸ್ಥಳಾವಕಾಶ ಬೇಕಾಗುತ್ತದೆ.
ಪ್ರತಿ ಸಾಕಾಣಿಕೆಗೆ ಮುನ್ನ ಹಾಗೂ ನಂತರ ಸಾಕಾಣಿಕಾ ಕೊಠಡಿ ಮತ್ತು ಸಲಕರಣೆಗಳನ್ನು ಕಡ್ಡಾಯವಾಗಿ ಕ್ರಮಬದ್ಧ ಸೋಂಕು ನಿವಾರಣೆ ಮಾಡಬೇಕು.
ಹುಳು ಗಳನ್ನು ಬಿಡುವ ಬಿದಿರಿನ ಚಂದ್ರಿಕೆ :
* ಈ ಚಂದ್ರಿಕೆಯನ್ನು ಸಾಂಪ್ರದಾಯಿಕವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಳಸಲಾಗುತ್ತಿದೆ. ಬಿದಿರು ಕಡ್ಡಿಗಳನ್ನು ಸೇರಿಸಿ ಹೆಣೆದ ಬಿದಿರಿನ ಚಾಪೆಯ ಮೇಲೆ ಬಿದಿರಿನಿಂದ ಮಾಡಿದ ಸುರುಳಿಯಾಕಾರದ ಪಟ್ಟಿಯನ್ನು ಈ ಚಂದ್ರಿಕೆಗಳು ಹೊಂದಿರುತ್ತವೆ.
ಚಂದ್ರಿಕೆಯ ಅಳತೆಯು 1.8 x 1.2 ಮೀ. ಇದ್ದು, ಸುರುಳಿಯಾಕಾರದ ಪಟ್ಟಿಗಳ ಮಧ್ಯೆ ಸುಮಾರು 5-6 ಸೆಂ.ಮೀ. ಅಂತರವಿರುತ್ತದೆ. ಬಿದಿರಿನ ಚಾಪೆಯಲ್ಲಿರುವ ರಂಧ್ರಗಳಿಂದ ಗಾಳಿ ಸಂಚಾರಕ್ಕೆ ಅನುಕೂಲ ಇರುತ್ತದೆ.
ಈ ರೀತಿಯ ಚಂದ್ರಿಕೆಗಳಲ್ಲಿ ಒಂದು ಚದರಡಿಗೆ 40-60 ಹುಳುಗಳನ್ನು ಬಿಡಬಹುದು. ಗೂಡು ಕಟ್ಟುವ ಸಮಯದಲ್ಲಿ ಎರಡು ಚಂದ್ರಿಕೆಗಳನ್ನು 450 ಕೋನ ಬರುವಂತೆ ಜೋಡಿಸಿದಲ್ಲಿ ಕಳಪೆ ಗೂಡುಗಳ ಸಂಖ್ಯೆ ಕಡಿಮೆಯಾಗುತ್ತದೆ.
ಸಾಮಾನ್ಯವಾಗಿ ರೇಷ್ಮೆ ಹುಳುಗಳು ಇಡುವ ಮೊಟ್ಟೆ ಸಂಖ್ಯೆ ಎಷ್ಟು??
* ಒಂದುಹೆಣ್ಣು ರೇಷ್ಮೆ ಹುಳು 300 ರಿಂದ 500 ಮೊಟ್ಟೆಗಳನ್ನು ಇಡುತ್ತದೆ.
ರೇಷ್ಮೆ ಹುಳುಗಳು ಲಾರ್ವಾಗಳು ಅಥವಾ ಮರಿಹುಳುಗಳನ್ನು ರೂಪಿಸುತ್ತವೆ, ಇದನ್ನು ರೇಷ್ಮೆ ಹುಳುಗಳು ಎಂದು ಕರೆಯಲಾಗುತ್ತದೆ.
ಮಲ್ಬೆರಿ ಎಲೆಗಳಲ್ಲಿ ಲಾರ್ವಾಗಳು ಆಹಾರವನ್ನು ನೀಡುತ್ತವೆ.
ಹಲವಾರು ಬಾರಿ ಬೆಳೆದು ಕರಗಿದ ನಂತರ, ರೇಷ್ಮೆ ಹುಳು ರೇಷ್ಮೆ ನಾರುಗಳನ್ನು ಹೊರತೆಗೆದು ತನ್ನನ್ನು ಹಿಡಿದಿಡಲು ಬಲೆಯನ್ನು ರೂಪಿಸುತ್ತದೆ.
ಇದು ‘8’ ಚಿತ್ರದಲ್ಲಿ ಅಕ್ಕಪಕ್ಕಕ್ಕೆ ತಿರುಗುತ್ತದೆ, ರೇಷ್ಮೆ ರೂಪಿಸುವ ಲಾಲಾರಸವನ್ನು ವಿತರಿಸುತ್ತದೆ.
ರೇಷ್ಮೆ ಗಾಳಿಯನ್ನು ಸಂಪರ್ಕಿಸಿದಾಗ ಅದು ಗಟ್ಟಿಯಾಗುತ್ತದೆ.
ಸಾಮಾನ್ಯವಾಗಿ ಹುಳುಗಳಿಗೆ ಬರಬಹುದಾದಂತ ರೋಗಗಳು ಯಾವುವು ಎಂದರೆ??
* ಗಂಟು ರೋಗ
* ಹಾಲು ತೊಂಡೆ ರೋಗ
* ಸುಣ್ಣ ಕಟ್ಟು ರೋಗ
ರೇಷ್ಮೆ ಹುಳುಗಳು ವೈಜ್ಞಾನಿಕವಾಗಿ ತುಂಬಾ ಸೂಕ್ಷ್ಮವಾದ ಜೀವಿಗಳಾದ್ದರಿಂದ ಸೋಂಕು ಹರಡುವುದು ತೀರಸಾಮಾನ್ಯ ಹಾಗಾಗಿ ಗೂಡು ಇಡುವ ಮೊದಲು ಹಾಗೂ ಗೂಡು ತೆಗೆದ ನಂತರ ಸೋಂಕು ನಿವಾರಣ ಕೆಲಸ ಅತ್ಯವಶ್ಯಕ.
ರೇಷ್ಮೆ ಬೆಳೆಗಾರೊಬ್ಬರ ಮಾಹಿತಿ ಪ್ರಕಾರ, ರೇಷ್ಮೆ ಬೆಳೆಯು ಕಡಿಮೆ ಖರ್ಚನ್ನು ಹೊಂದಿದ್ದು, ಅಧಿಕ ಲಾಭವನ್ನು ತರುವಂತ ಸುಲಭ ಕೃಷಿ, ಹಾಗಾಗಿ ನರ್ಸರಿ ಬೆಳೆಸುವುದರಿಂದ ಹಿಡಿದು ಹುಳು ಸಾಕಾಣಿಕೆ ವರೆಗೂ ಕ್ರಮಬದ್ಧ ಕ್ರಮವನ್ನು ಅನುಸರಿಸಿದ್ದೇ ಆದಲ್ಲಿ ಅಧಿಕ ಲಾಭದ ಜೊತೆಗೆ ಉತ್ತಮ ಆದಾಯವು ಇರುತ್ತದೆ ಎಂದು ಹೇಳುತ್ತಾರೆ.
ಏಕೆಂದರೆ ಸಾಮಾನ್ಯವಾಗಿ ರೇಷ್ಮೆ ಬೆಳೆಯಲ್ಲಿ ಪ್ರಮುಖವಾಗಿ ಗಮನಿಸುವ ಅಂಶವೆಂದರೆ ರೇಷ್ಮೆ ಗೂಡಿನ ಗುಣಮಟ್ಟ ಹೇಗಿರುತ್ತದೆ ಎಂದು. ಹಾಗಾಗಿ ರೇಷ್ಮೆ ದಾರವು ದಪ್ಪವಾಗಿ ಮತ್ತು ಸರಾಗವಾಗಿ ಇರಬೇಕೆಂದರೆ ಉತ್ತಮ ಗುಣಮಟ್ಟದ ಸೊಪ್ಪನ್ನು ಹುಳುಗಳಿಗೆ ನೀಡುವುದರಿಂದ ಉತ್ತಮ ಗುಣಮಟ್ಟದ ರೇಷ್ಮೆ ನೂಲು ತಯಾರಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ.
ರೇಷ್ಮೆ ನೂಲು ತೆಳುವಾಗಿದ್ದರೆ ಮತ್ತು ಸಣ್ಣದಾಗಿದ್ದರೆ ಅದಕ್ಕೆ ಹೆಚ್ಚಿನ ಬೆಲೆ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲವೆಂದು. ಹಾಗೂ ರೇಷ್ಮೆ ನೂಲು ದಪ್ಪವಾಗಿದ್ದರೆ ಉತ್ತಮ ಬೆಲೆ ಅಂದರೆ ಕೇಜಿಗೆ ರೂ.400 ರಿಂದ 500 ರವರೆಗೂ ಮಾರಾಟವಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಯಾವುದೇ ಕೃಷಿ ಇರಲಿ ಕ್ರಮಬದ್ಧವಾಗಿ ಮಾಡುವುದು ಅತ್ಯವಶ್ಯಕ ಆದರೆ ರೇಷ್ಮೆಯಲ್ಲಿ ಗುಣಮಟ್ಟ ಪ್ರಮುಖ ಅಂಶವಾಗಿರುವುದರಿಂದ ಉತ್ತಮ ಗುಣಮಟ್ಟಕ್ಕಾಗಿ ಹುಳು ಸಾಕಾಣಿಕೆ ಪ್ರಕ್ರಿಯೆ ತುಂಬಾ ಮುಖ್ಯವಾಗಿರುತ್ತದೆ.
ಇಲ್ಲಿ ಹುಳು ಮನೆ ನಿರ್ಮಾಣ, ಸೋಂಕು ನಿವಾರಣೆ ಹಾಗೂ ಹುಳುಗಳಿಗೆ ರೋಗಗಳು ತಗಲದಂತೆ ವಹಿಸುವ ಎಚ್ಚರ ಹೀಗೆ ಎಲ್ಲಾ ವಿಷಯಗಳು ಪ್ರಮುಖವಾಗುತ್ತವೆ.
ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ರೈತರಿಗೆ ರೇಷ್ಮೆ ಬೆಳೆಯ ಬಗ್ಗೆ ಅರಿವು ಮೂಡಿಸುವ ಕುರಿತು ನೀಡುವ ಮಾಹಿತಿಯಾಗಿರುತ್ತದೆ, ಹಾಗಾಗಿ ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆಯಬಹುದು.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ