ಒಂದು ರೂಪಾಯಿ ಖರ್ಚು ಮಾಡದೆ…!!! ಹತ್ತು ನಿಮಿಷದಲ್ಲಿ ಹಗ್ಗ ರೆಡಿ..!!!!! ಹಗ್ಗ ತಯಾರಿಸಲು ರೈತನ ಅದ್ಭುತ ಉಪಾಯ..!!!
ರೈತರಿಗೆ ಕೃಷಿ ಹಾಗೂ ಹೈನುಗಾರಿಕೆಗೆ ಹಗ್ಗದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೇ ಹಳ್ಳಿಗಳಲ್ಲಿ ವಾಸಿಸುವವರಿಗೆ ಹಗ್ಗವು ಬೇಕೇ ಬೇಕು. ನಗರ ಪ್ರದೇಶಗಳಲ್ಲಿ ಹಗ್ಗದ ಬಳಕೆ ಕಡಿಮೆ ಇದ್ದರೂ ಸಹ ಎಲ್ಲಾ ಮನೆಗಳಲ್ಲಿ ಹಗ್ಗ ಬಳಕೆ ಮಾಡಲಾಗುತ್ತದೆ. ಆದ್ದರಿಂದ ನಾವು ಇಂದು ಸುಲಭವಾಗಿ ಮನೆಯಲ್ಲಿಯೇ ಹಗ್ಗವನ್ನು ತಯಾರಿಸುವ ವಿಧಾನವನ್ನು ಹೇಳುತ್ತಿದ್ದೇವೆ.
ಹಗ್ಗ ತಯಾರಿಸುವ ವಿಧಾನ ಹೇಗೆ?
*ನಿಮ್ಮ ಮನೆಯಲ್ಲಿರುವ ಒಂದು ಕಟ್ಟಿಗೆಯ ಅಥವಾ ಕಲ್ಲಿನ ಕಂಬಕ್ಕೆ 2 ಹೋಲುಗಳನ್ನು (ರಂಧ್ರಗಳನ್ನು) ಮಾಡಿ.
*ಆ ರಂಧ್ರಗಳಿಗೆ ಒಂದು ಕಟ್ಟಿಗೆಯ ಮೂಲಕ ಹಾಯಿಸಲಾದ ತಂತಿಯನ್ನು ಚಿತ್ರದಲ್ಲಿ ತೋರಿಸುವಂತೆ ಹಾಕಿ
*ನಂತರ ಆ ತಂತಿಯನ್ನು ಚಕ್ರದ ಹಾಗೆ ತಿರುಗಿಸಲು ಬರುವ ರೀತಿಯಲ್ಲಿ ಜೋಡಿಸಿ.
*ಆನಂತರ ಡಿಎಪಿ ಅಥವಾ ಯುರಿಯಾ ಗೊಬ್ಬರದ ಪ್ಲಾಸ್ಟಿಕ್ ಚೀಲಗಳನ್ನು ಉದ್ದವಾಗಿ ಕತ್ತರಿಸಿಕೊಳ್ಳಿ.
*ಆ ಪ್ಲಾಸ್ಟಿಕ್ ಗಳನ್ನು ಒಂದು ರಂಧ್ರದ ತಂತಿಗೆ ಹಾಕಿ ಹಿಂದಿನ ತಂತಿಯ ತುದಿಯಿಂದ ತಿರುಗಿಸುತ್ತಾ ಹೋಗಿ. ಆಗ ಹಗ್ಗ ಹೊಸೆಯುತ್ತಾ(ತಯಾರಾಗುತ್ತಾ) ಹೋಗುತ್ತದೆ.
*ಪ್ಲಾಸ್ಟಿಕ್ ಕೊನೆಗೆ ತಲುಪಿದಾಗ ಅದರ ಇನ್ನೊಂದು ತುದಿಯನ್ನು ಮೇಲಿನ ಇನ್ನೊಂದು ರಂಧ್ರದ ತಂತಿಗೆ. ಹಾಕಿ
*ನಂತರ ಎರಡು ತಂತಿಯ ಚಕ್ರಗಳನ್ನು ತಿರುಗಿಸಿ
*ಆಗ ಹಗ್ಗ ತಯಾರಾಗುತ್ತದೆ.
ನಯಾಪೈಸೆ ಖಚಿ೯ಲ್ಲದೇ 150 ರೂಪಾಯಿ ಹಗ್ಗ!
ಈ ರೀತಿ ಮಾಡಿದರೆ ಒಂದು ಪೈಸಾ ಖಚಿ೯ಲ್ಲದೇ ಕೇವಲ 5 ನಿಮಿಷದಲ್ಲಿ ಮನೆಯಲ್ಲಿಯೇ 150 ರೂಪಾಯಿಗಿಂತ ಹೆಚ್ಚು ಬೆಲೆ ಬಾಳುವ ಹಗ್ಗ ತಯಾರಿಸಬಹುದು. ಇದರಿಂದ ಹಣದ ಉಳಿತಾಯವಾಗುವುದಲ್ಲದೇ ನಮ್ಮ ಅವಶ್ಯಕತೆಗೆ ತಕ್ಕಂತಹ ಹಗ್ಗಗಳನ್ನು ತಯಾರಿಸಿಕೊಳ್ಳಬಹುದು.
ಆದ್ದರಿಂದ ರೈತರು ಈ ಮಾದರಿಯನ್ನು ಉಪಯೋಗಿಸಿ ಹಗ್ಗ ತಯಾರಿಸಿಕೊಳ್ಳಿ ಹಾಗೂ ಇದೇ ರೀತಿಯಲ್ಲಿ ಮನೆಯಲ್ಲಿಯೇ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ಉಪಯುಕ್ತ ವಸ್ತುಗಳನ್ನಾಗಿ ಮಾಡುವ ಕಲೆಯನ್ನು ರೂಡಿಸಿಕೊಳ್ಳಿ. ಇದರಿಂದ ಪರಿಸರ ಹಾಗೂ ಹಣದ ಉಳಿತಾಯವಾಗುತ್ತದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ