ಉತ್ತಮ ಗುಣಮಟ್ಟದ ಹಸುಗಳೆಂದು ತಿಳಿಯುವುದು ಹೇಗೆ..???ಉತ್ತಮ ಹಾಲಿನ ಇಳುವರಿ ಜೊತೆಗೆ ಹಸುವಿನ ಆರೋಗ್ಯ ರಕ್ಷಣೆ ಅತಿ ಅಗತ್ಯ..!!!!
ನಮಸ್ಕಾರ ರೈತ ಬಾಂಧವರೇ, ನಮ್ಮೆಲ್ಲರಿಗೂ ತಿಳಿದಿರುವಂತೆ ಜನಜೀವನದ ದಿನನಿತ್ಯದ ಕಾರ್ಯಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅವಶ್ಯಕತೆ ತೀರಾ ಅಗತ್ಯವಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಕುಸಿಯುತ್ತಿದೆ. ಕಾರಣ ಕಡಿಮೆ ಗುಣಮಟ್ಟದ ಮೇವು ಹಾಗೂ ಹಸುಗಳ ಬಗ್ಗೆ ಹಾಗೂ ಅವುಗಳ ಸಾಕಾಣಿಕೆ ಬಗ್ಗೆ ಇರುವ ಅಲ್ಪಜ್ಞಾನ.
ಯಾವ ರೀತಿ ಹೈನುಗಾರಿಕೆ ಒಳ್ಳೆಯ ಮತ್ತು ಹಾಲಿನ ಕಾಯಿಲೆಯಿಂದ ಬಳಲುತ್ತಿದ್ದರೆ ಹಾಲಿನ ಬಗ್ಗೆ ಕಡಿಮೆ ತಿಳುವಳಿಕೆ ಮತ್ತು ಇತರ ಕಾರಣಗಳಿಂದ ಉತ್ತಮ ಗುಣಮಟ್ಟದ ಜೊತೆಗೆ ರೈತರ ಆದಾಯದಲ್ಲಿ ಇಳಿಕೆಯಾಗುತ್ತಿದೆ.
ಇದು ರೈತ ಸಮುದಾಯದಲ್ಲಿರುವ ಪ್ರಮುಖ ಕಳವಳಕಾರಿ ಅಂಶ. ಈ ಕುರಿತು ಹಸುಗಳ ಸಂರಕ್ಷಣೆ ಹಾಗೂ ಹೈನುಗಾರಿಕೆ ಬಗ್ಗೆ ತಿಳುವಳಿಕೆ ತೀರಾ ಅಗತ್ಯವಾಗಿದೆ.
ಉತ್ತಮ ಗುಣಮಟ್ಟದ ಹಾಲನ್ನು ಯಾವಾಗಲೂ ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಿ. ಹಸುಗಳ ಗುಣಮಟ್ಟ ಹಾಗೂ ಅವುಗಳ ತೂಕ ಮತ್ತು ಅಡ್ಡಗಳು ಮುಖ್ಯವಾಗುತ್ತವೆ.
ಹಾಗಾದರೆ ಉತ್ತಮ ಗುಣಮಟ್ಟದ ಹಸುಗಳೆಂದು ತಿಳಿಯುವುದು ಹೇಗೆ??
ಉತ್ತಮ ಗುಣಮಟ್ಟದ ಸೀಮೆಹಸುಗಳಲ್ಲಿ ಸಾಮಾನ್ಯವಾಗಿ
* ಕೆಚ್ಚಲಿನ ತೊಟ್ಟಿನ ಭಾಗದಲ್ಲಿ ಕಪ್ಪು ಗುರುತು ಇರುತ್ತದೆ.
* ಕಾಲಿನ ಭಾಗದ ಬಿಳಿ ಗೊರಸುಗಳಲ್ಲಿಯೂ ಕಪ್ಪು ಗುರುತು ಇರುತ್ತದೆ.
* ಕೆಚ್ಚಲು ಭಾಗದಲ್ಲಿ ನಾಲ್ಕು ಭಾಗಗಳಲ್ಲಿಯೂ ನಾಲ್ಕು ಪಾಳಿಗಳು ಇರಬೇಕು.
* ಹಸುವಿನ ಚರ್ಮ ತೆಳುವಾಗುವುದು.
* ತಲೆ ಅಥವಾ ಬುರ್ರೆ ಭಾಗದಲ್ಲಿ ಕೂದಲು ಬೆಳೆಯುತ್ತಿರಬೇಕು.
ಇದು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಹಸುಗಳ ಗುಣವಿಶೇಷವಿದೆ.
ಹಾಗಾದರೆ ಹಸು ಸಾಕಾಣಿಕೆಯ ಷಡ್ ನಿರ್ಮಾಣ ಹೇಗೆ??
ಹಲವಾರು ಜನ ಹಲವಾರು ರೀತಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಶೆಡ್ ನಿರ್ಮಾಣ ಮಾಡಿಕೊಂಡಿರುತ್ತಾರೆ.
ಈ ಶೆಡ್ ನಲ್ಲಿ ಬಹು ಮುಖ್ಯವಾಗಿ ಸಾಧ್ಯವಾದಷ್ಟು ಗಾಳಿ ಬೆಳಕು ಅವಶ್ಯವಾಗಿ ಇರಬೇಕು. ತೀರ ಬಿಸಿಲಿನ ಜಳ ಬಡೆಯದಂತೆ ಹಾಗೂ ತೇವಾಂಶ ಇರದಂತೆ ನೋಡಿಕೊಳ್ಳುವುದು ಮತ್ತು ಬಿಸಿಲಿನ ಕಾಲದಲ್ಲಿ ಹಬೆಯ ವಾತಾವರಣ ಇರದೇ ಇರುವುದು ಅತಿ ಅಗತ್ಯ.
ಸಾಮಾನ್ಯವಾಗಿ ದನಗಳು ಎದ್ದು ನಿಂತು ಮೇವು ಮೇಯುತ್ತವೆ ಹಾಗೂ ಮಲಗಿರುವಾಗ ಮೇಯುವುದಿಲ್ಲ. ಯಾವುದೇ ದನಗಳಿಗೆ ನಿಂತಾಗ ಮೇಯುವ ರೀತಿ ನೋಡಿಕೊಂಡು ಅದರ ಎತ್ತರವನ್ನು ತಿಳಿದುಕೊಂಡು ಶೆಡ್ ನಿರ್ಮಾಣಕ್ಕೆ ಅನುಕೂಲವಾಗಿದೆ.
ಸಾಮಾನ್ಯವಾಗಿ ಹಳ್ಳಿಯ ಕಡೆ ಶೆಡ್ ನಿರ್ಮಾಣ ಹೇಗೆ??
ಹಿಂದಿನ ಷಡ್ ನಿರ್ಮಾಣಕ್ಕಾಗಿ ಸಿಮೆಂಟ್ ಅಥವಾ ಇತರ ರೀತಿಯ ವಸ್ತುಗಳನ್ನು ಬಳಸಲಾಗುತ್ತಿತ್ತು
* ಸುತ್ತಲೂ ಎತ್ತರದ ಸೈಜ್ ಕಲ್ಲುಗಳನ್ನು ನೆಟ್ಟು ಸುತ್ತಲೂ ಮನೆಯ ರೀತಿ ನಿರ್ಮಾಣ ಮಾಡಬೇಕು.
* ಕಲ್ಲಿನ ಮೂರು ಮೇಲ್ಭಾಗದಲ್ಲಿ ಕಬ್ಬಿಣದ ಎರಡರಿಂದ ಅಡಿಯವರಿಗೂ ಹುಳ ಹುಪ್ಪಡೆ ಬಾರದಂತೆ ತಡೆಯಲು ಮೆಸ್ಸನ್ನು ಹೊಡೆಸಬೇಕು.
* ಮೇಲ್ಚಾವಣಿಗಾಗಿ ಶೀಟ್ ಹಾಕಿದರೆ ಬಂದೋಬಸ್ತಾದ ಹಸುವಿನ ಶೆಡ್ ನಿರ್ಮಾಣವಾಗುತ್ತದೆ.
* ಹಸುವಿಗೆ ಅನುಕೂಲಕರವಾಗಿ ಮಲಗಲು ಕೆಳಗಡೆ ಸಹ ಕಲ್ಲನ್ನು ಹಾಸದಿದ್ದರೆ.
ಇಲ್ಲಿ ಕಲ್ಲುಗಳು ಹಾಗೂ ಮೆಸ್ ಮತ್ತು ಶೀಟ್ ಗಳು ಶೆಡ್ ನ ಕೆಲಸ ಮುಗಿದ ನಂತರವೂ ಬೇರೆ ಕಾರ್ಯಗಳಿಗೆ ಉಪಯೋಗವಾಗುತ್ತದೆ. ಆದರೆ ಕಟ್ಟಡ ಮತ್ತು ಪ್ಲಾಸ್ಟರ್ ನಿಂದ ಮಾಡಲ್ಪಟ್ಟ ಶೆಡ್ ನಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ