ಹಸು ಶೆಡ್ ನಿರ್ಮಾಣ ಮಾಡಲು ಎಷ್ಟು ಸ್ಥಳ ಬೇಕಾಗಬಹುದು…????
ಹಸು ಷಡ್ ನಿರ್ಮಾಣ ಮಾಡಲು ಸಾಮಾನ್ಯವಾಗಿ, 57 ಅಡಿ ಉದ್ದ ಹಾಗೂ 15 ಅಡಿ ಅಗಲ ಇದ್ದರೆ ಸಾಕು.
ಹಾಗೂ ಶೆಡ್ ನ ಅಳತೆ ಸಾಮಾನ್ಯವಾಗಿ ಹಸುಗಳ ಸಂಖ್ಯೆ ಮೇಲೆ ನಿರ್ಧಾರಿತವಾಗುತ್ತದೆ.
ಸಾಮಾನ್ಯವಾಗಿ ಹಸುಗಳು ಶೆಡ್ ನಲ್ಲಿ ಇರುವುದಕ್ಕಿಂತಲೂ ಹೆಚ್ಚಾಗಿ ಮಣ್ಣಿನ ನೆಲದ ಮೇಲೆ ಇರಲು ಇಚ್ಚಿಸುತ್ತವೆ. ಹಾಗಾಗಿ ಹಸು ಕಟ್ಟುವಿಕೆ ಜಾಗ ದಿನಕ್ಕೆ ಎರಡರಿಂದ ಮೂರು ಬಾರಿ ಬದಲಾಯಿಸುತ್ತಿರಬೇಕು.
ಹಸುವಿನ ಮೇವಿನ ಅಳತೆ ಹೇಗೆ??
* ಸೀಮೆ ಹಸುಗಳು ಸಾಮಾನ್ಯವಾಗಿ ಸೂಕ್ಷ್ಮವಾಗಿದ್ದು, ಕೊಡುವ ಮೇವಿನಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆ ಅತಿ ಮುಖ್ಯ.
ಮೇವು ದೇಸಿಯದ್ದೇ ಆದರೂ, ಮೇವನ್ನು ಯಾವಾಗಲೂ ತೂಗಿ ಅಳೆದು ನೀಡುವ ಬದಲು ಹಸು ತಿನ್ನುವಷ್ಟು ಕೊಟ್ಟಿದ್ದೆ ಆದಲ್ಲಿ ಹಾಲಿನ ಗುಣಮಟ್ಟ ಹಾಗೂ ಇಳುವರಿ ಹೆಚ್ಚಾಗಿರುತ್ತದೆ. ಬೂಸ ದಿನಕ್ಕೆರಡು ಬಾರಿ ಕೊಟ್ಟರೆ ಸಾಕಾಗುತ್ತದೆ.
ಹಸುಗಳ ಸ್ವಚ್ಛತೆ ಹೇಗೆ???
* ಸಾಮಾನ್ಯವಾಗಿ ಹಸುಗಳನ್ನು ಎರಡರಿಂದ ಮೂರು ದಿನಕ್ಕೊಮ್ಮೆ ತೊಳೆಯಬೇಕು.
* ಹಸುವಿನ ಸುತ್ತಲೂ ಆದಷ್ಟು ಸ್ವಚ್ಛತೆಯನ್ನು ಗಂಜಲು ಅಥವಾ ಸಗಣಿ ಇರದಂತೆ ನೋಡಿಕೊಳ್ಳಬೇಕು.
ಇಷ್ಟೆಲ್ಲ ಆದರೂ, ಕೆಲವು ಕಡೆ ಹಾಲಿನ ಉತ್ಪಾದಕರನ್ನು ಉತ್ತೇಜಿಸಲು ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ.
ಇದು ಪ್ರೋತ್ಸಾಹದಾಯಕ ಕೆಲಸವಾಗಿದ್ದರು, ಇಲ್ಲಿ ಪ್ರಶಸ್ತಿಯ ಆಸೆಗೆ ಕೆಲವರು ಕೆಲ ಹಸುಗಳಿಗೆ ಇಂಜೆಕ್ಷನ್ ಮತ್ತು ಡ್ರಿಪ್ಸ್ ಹಾಕುವ ಮೂಲಕ ಆ ದಿನಕ್ಕೆ ಮಾತ್ರ ಹೆಚ್ಚು ಹಾಲು ಕರೆಯುವ ರೀತಿ ಪುಶ್ ಅಪ್ ಮಾಡಿದಾಗ ಹಸುಗಳ ಜೀವಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಹಾಲಿನ ಗುಣಮಟ್ಟವು ಕುಸಿಯುತ್ತದೆ ಜೊತೆಗೆ ಹಸುವಿನ ಆರೋಗ್ಯವು ಹದಗೆಡುತ್ತದೆ ಎಂದು ಕೋಲಾರದ ರೈತರು ಒಬ್ಬರು ಮಾಹಿತಿ ನೀಡುತ್ತಾರೆ.
ಹಾಲು ಕರೆಯುವ ಸ್ಪರ್ಧೆ ಒಂದು ಸ್ಪರ್ಧಾತ್ಮಕ ಹಾಗೂ ಉತ್ತಮ ವಿಷಯವಾಗಿದ್ದು, ಇಲ್ಲಿ ಹಸುಗಳಿಗೆ ಆದಷ್ಟು ನೈಸರ್ಗಿಕವಾಗಿ ಹಾಲು ಕರೆಯಲು ಅವಕಾಶ ಕೊಟ್ಟಿದ್ದೆ ಆದಲ್ಲಿ ಹಾಲಿನ ಗುಣಮಟ್ಟದ ಜೊತೆಗೆ ಹಸುವಿನ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಇದರಿಂದ ಇನ್ನೂ ಹೆಚ್ಚು ಹೆಚ್ಚು ಲಾಭ ಮತ್ತು ರೈತರ ಮೊಗದಲ್ಲಿ ಮಂದಹಾಸ ಕಾಣಬಹುದು.
ಹಾಗಾಗಿ ಹಾಲಿನ ಗುಣಮಟ್ಟ ಹೆಚ್ಚಿಸಲು ಸಾಧ್ಯವಾದಷ್ಟು ಹಸುಗಳ ಆರೋಗ್ಯ ಕಾಪಾಡುವುದು ಅತ್ಯವಶ್ಯಕ. ಹಸುಗಳಿಗೆ ನೈಸರ್ಗಿಕವಾಗಿಯೇ ಮೇವು,ಬೂಸಾ ಹಾಗೂ ಶೆಡ್ ನಿರ್ಮಾಣ ವಿದ್ದರೆ ಹಸುಗಳ ಆರೋಗ್ಯ ಉತ್ತಮವಾಗಿರುತ್ತದೆ, ಹಸುಗಳ ಆರೋಗ್ಯ ಉತ್ತಮವಾಗಿದ್ದರೆ,ಹಾಲಿನ ಗುಣಮಟ್ಟವು ಉತ್ತಮವಾಗಿರುತ್ತದೆ.
ಉತ್ತಮ ಗುಣಮಟ್ಟದ ಹಾಲಿನಿಂದ ರೈತರ ಆದಾಯವು ಉತ್ತಮವಾಗಿರುತ್ತದೆ.
ಈ ಮೇಲೆ ತಿಳಿಸಿರುವಂತಹ ಎಲ್ಲಾ ಉಪಯುಕ್ತ ಮಾಹಿತಿಗಳು ಹೈನುಗಾರಿಕೆ ಹಾಗೂ ಹಸು ಸಾಕಾಣಿಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಮತ್ತು ರೈತರ ಆದಾಯ ಹೆಚ್ಚಿಸುವ ಸಲುವಾಗಿ ಪ್ರಕಟಿಸಲಾಗಿರುತ್ತದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ