ಇಂದಿನ ಭತ್ತ ಮತ್ತು ಅಕ್ಕಿ ಮಾರುಕಟ್ಟೆ ದರ 21 \ 02 \ 2024…!!!
ಭತ್ತವನ್ನು ರಾಜ್ಯದಲ್ಲಿ ನೀರಾವರಿ ಹಾಗೂ ಮಳೆಯಾಶ್ರಯದಲ್ಲಿ ಅಂದಾಜು 9.93 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದೆ, ಒಟ್ಟು ಉತ್ಪಾದನೆ 29.07 ಲಕ್ಷ ಟನ್‌ಗಳಷ್ಟಿದ್ದು, ಸರಾಸರಿ ಉತ್ಪಾದಕತೆಯು ಪ್ರತಿ ದರಕ್ಕೆ 11.71 ಕ್ವಿಂಟಲ್ ಇರುತ್ತದೆ (2017-18). ಭತ್ತವನ್ನು ಗುಡ್ಡಗಾಡು ಪ್ರದೇಶ (ವಲಯ-9) ಮತ್ತು ಕರಾವಳಿ ಪ್ರದೇಶ (ವಲಯ-10), ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಶ್ರತದಲ್ಲಿ, ಈಶಾನ್ಯದ ಅರೆಮಲೆನಾಡು ಹಾಗೂ ಒಣವಲಯದ (ಪ್ರದೇಶ 1, ವಲಯ 1 ಮತ್ತು 2) ಪ್ರದೇಶದ ಕಾಲುವೆ, ಕೆರೆ ಮತ್ತು ಏತ ನೀರಾವರಿ ಆಶ್ರಯದಲ್ಲಿ ಬೆಳೆಯುತ್ತಿದೆ. ಈ ಪ್ರದೇಶದ ಭತ್ತ ಬೆಳೆಯುವ ಮುಖ್ಯ ತಾಲೂಕುಗಳಲ್ಲಿ ಮಾನ್ವಿ, ರಾಯಚೂರು, ಬೀದರ, ಭಾಲ್ಕಿ, ಔರಾದ್, ಆಳಂದ, ಚಿಂಚೋಳಿ, ಚಿತ್ತಾಪೂರ, ಯಾದಗಿರಿ ಮತ್ತು ಸೇಡಂ, ಈಶಾನ್ಯ ಮತ್ತು ಉತ್ತರದ ಒಣ ಜಿಲ್ಲೆಗಳು (ಪ್ರದೇಶ 2, ವಲಯ 3) ರಾಯಚೂರು, ಬಳ್ಳಾರಿ, ಬೆಳಗಾವಿ ಮತ್ತು ವಿಜಯಪುರಗಳಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುತ್ತಿದೆ.
ಭತ್ತ ಮಾರುಕಟ್ಟೆ ದರ….!!!!
ಮಾರುಕಟ್ಟೆ | ದಿನಾಂಕ | ವೆರೈಟಿ | ಗರಿಷ್ಠ ಬೆಲೆ |
ಬಂಗಾರಪೇಟೆ
ಚಳ್ಳಕೆರೆ |
12\01\24
25\06\23 |
ಭತ್ತ ಮಧ್ಯಮ ವೈವಿಧ್ಯ
ಭತ್ತ |
2500
2601 |
ದಾವಣಗೆರೆ | 17\01\24 | ಭತ್ತ ಮಧ್ಯಮ ವೈವಿಧ್ಯ | 3180 |
ಗಂಗವತಿ | 17\01\24 | ಕಾವೇರಿ ಸೋನಾ | 2613 |
ಗಂಗವತಿ | 21\02\24 | ಭತ್ತದ RNR ಹೊಸ | 3400 |
ಗಂಗವತಿ | 17\01\24 | ಭತ್ತದ RNR ಹಳೆಯದು | 3826 |
ಗಂಗವತಿ | 21\02\24 | ಸೋನಾ ಮಸೂರಿ ಹೊಸದು | 3133 |
ಭತ್ತದಲ್ಲಿ ಯಾಂತ್ರೀಕೃತ ನಾಟಿ ವಿಧಾನ :-
ಕಡಿಮೆ ಆಳಿನ ಖರ್ಚಿನಲ್ಲಿ, ನಿರ್ದಿಷ್ಟ ಸಂಖ್ಯೆಯ ಸಸಿಗಳನ್ನು ಸರಿಯಾದ ಸಮಯದಲ್ಲಿ ಭತ್ತವನ್ನು ನಾಟಿ ಮಾಡಲು ನಾಟಿ ಯಂತ್ರ ಬಳಸುವುದು ಮುಖ್ಯ.
ಯಾಂತ್ರೀಕೃತ ಭತ್ತ ನಾಟಿ ಮಾಡುವುದಕ್ಕೆ ಸಾಮಾನ್ಯ ಪದ್ಧತಿಯಲ್ಲಿ ಬೆಳೆದಂತಹ ಸಸಿಮಡಿ ಬೇರುಗಳ ಬೆಳವಣಿಗೆ ಸಮ ಇಲ್ಲದಿರುವುದರಿಂದ ಸೂಕ್ತವಾಗಿರುವುದಿಲ್ಲ. ಸಸಿಗಳನ್ನು ಚಾಪೆ ಮಡಿ ಪದ್ಧತಿಯಲ್ಲಿ ಬೆಳೆಸಬೇಕಾಗುತ್ತದೆ.
ಗಂಗವತಿ | 25\07\23 | IR 64 | 1909 |
ಹರಿಹರ | 19\02\24 | ಭತ್ತದ ಸೋನಾ | 2500 |
ಕಾರ್ಟಗಿ | 11\01\24 | ಸೋನಾ ಮಸೂರಿ ಓಲ್ಡ್ | 3503 |
ಕಾರ್ಟಗಿ | 11\01\24 | ಸೋನಾ ಮಸೂರಿ ಹೊಸದು | 2990 |
ಲಿಂಗಸರಗೂರು | 16\02\24 | ಭತ್ತದ ಸೋನಾ | 2700 |
ಮಧುಗಿರಿ | 21\06\23 | ಹಂಸ | 1500 |
ಮೈಸೂರು | 24\07\23 | ಭತ್ತ | 2477 |
ರಾಯಚೂರು | 17\01\24 | ರಾಜಹಂಸ | 1819 |
ರಾಯಚೂರು | 21\02\24 | ಸೋನಾ ಮಸೂರಿ | 2849 |
ಸಿಂಧನೂರು
ಸಿಂಧನೂರು |
16\02\24
20\02\24 |
ಭತ್ತದ RNR ಹೊಸ
ಭತ್ತದ ಸೋನಾ |
3280
3430 |
ಭತ್ತದಲ್ಲಿ ಪೋಷಕಾಂಶಗಳ ನಿರ್ವಹಣೆ :-
ಸಾರಜನಕದ ನಿರ್ವಹಣೆ:-
ಭತ್ತದ ಬೆಳೆಗೆ ಕೊಡಬೇಕಾದ ಎಲ್ಲ ಸಾರಜನಕವನ್ನು ಒಂದೇ ಬಾರಿ ಕೊಡುವುದಕ್ಕಿಂತ ಎರಡು/ಮೂರು ಕಂತುಗಳಲ್ಲಿ ಕೊಡುವುದರಿಂದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೆಳೆಗೆ ಬೇಕಾದಷ್ಟು ಪ್ರಮಾಣದಲ್ಲಿ ಸಾರಜನಕವನ್ನು ಒದಗಿಸಿದಂತಾಗುವುದರ ಜೊತೆಗೆ ಪೋಲಾಗುವ ಸಾರಜನಕವನ್ನು ಕಡಿಮೆ ಮಾಡಬಹುದು.
ಸಾರಜನಕವನ್ನು ಒದಗಿಸುವ ಸಮಯ ಮತ್ತು ಪ್ರಮಾಣವನ್ನು ನಿರ್ಧರಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು.
* ಬೆಳೆ ಬೆಳವಣಿಗೆಯ ಪ್ರಾರಂಭದಲ್ಲಿ ಸಾರಜನಕವನ್ನು ಒದಗಿಸುವುದರಿಂದ ಮರಿಗಳು ಚೆನ್ನಾಗಿ ಬರುತ್ತವೆ.
* ತಡವಾಗಿ ಸಾರಜನಕವನ್ನು ಒದಗಿಸುವುದರಿಂದ ಮರಿಗಳ ಬೆಳವಣಿಗೆಯಾಗುವುದಿಲ್ಲ.
ಬೆಳೆಗೆ ಕೊಡಬೇಕಾದ ಸಾರಜನಕದ ಪ್ರಮಾಣ ಮತ್ತು ವಿಧಾನಗಳ ಅಳವಡಿಕೆಗ
ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು :-
* ಸಾರಜನಕವನ್ನು ಅಮೋನಿಯಂ ಸಲ್ವೇಟ್ ಅಥವಾ ಯೂರಿಯಾ ರೂಪದಲ್ಲಿ ಒದಗಿಸಬೇಕು.
* ನಾಟಿ ಸಮಯದಲ್ಲಿ ಕೊಡಬೇಕಾದ ಸಾರಜನಕವನ್ನು ಜಮೀನು ತಯಾರಿಕೆಯ ಕೊನೆಯ ಉಳುಮೆ ಹಂತದಲ್ಲಿ ಕೊಡಬೇಕು.
* ಮೇಲುಗೊಬ್ಬರ ಒದಗಿಸುವ 24 ಗಂಟೆಗಳ ಮುಂಚೆ ಗದ್ದೆಯಲ್ಲಿನ ನೀರು ಬಸಿದು ತೆಗೆದು, ಮೇಲು ಒದಗಿಸಿ, 24 ಗಂಟೆಗಳ ನಂತರ ಬೆಳೆಗೆ ನೀರು ಹಾಯಿಸಬೇಕು.
* ನಾಟಿ ಮಾಡಿದ ಮೂರು ಹಾಗೂ ಆರು ವಾರಗಳ ನಂತರ ಮತ್ತು ತೆನೆ ಬರುವ ಹಂತದಲ್ಲಿ ಎಕರೆಗೆ 10 ಕಿ. ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು (ವಲಯ 3 ರಲ್ಲಿ).
ಸೂಚನೆಗಳು:-
* ಅಲ್ಪಾವಧಿ ತಳಿಗಳಿಗೆ ಬೆಳೆಯ ಪ್ರಾರಂಭದಲ್ಲಿ ಹೆಚ್ಚು ಪ್ರಮಾಣದ ಸಾರಜನಕ ಕೊಡಬೇಕು.
* ದೀರ್ಘಾವಧಿ ತಳಿಗಳಿಗೆ ಮೇಲುಗೊಬ್ಬರವಾಗಿ ಹೆಚ್ಚು ಪ್ರಮಾಣದ ಸಾರಜನಕ ಕೊಡಬೇಕು.
* ಬೆಳೆ ಪ್ರಾರಂಭದಲ್ಲಿ ತಂಪು ಹವಾಗುಣವಿದ್ದಲ್ಲಿ ಮೇಲುಗೊಬ್ಬರವಾಗಿ ಹೆಚ್ಚು ಪ್ರಮಾಣದ ಸಾರಜನಕ ಒದಗಿಸಬೇಕು.
* ಬೆಳೆಯಲ್ಲಿ ದುಂಡಾಣುರೋಗ ಬರುವ ಲಕ್ಷಣ ಕಂಡಲ್ಲಿ ಸಾರಜನಕವನ್ನು ಹೆಚ್ಚು ಕಂತುಗಳಲ್ಲಿ ಮೇಲುಗೊಬ್ಬರವಾಗಿ ಒದಗಿಸಬೇಕು.
* ಹೆಚ್ಚು ವಯಸ್ಸಿನ ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ಹೆಚ್ಚು ಸಾರಜನಕ ಒದಗಿಸಿ ಕಡಿಮೆ ಅಂತರದಲ್ಲಿ ನಾಟಿ ಮಾಡಬೇಕು.
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ