ಕೇವಲ 100 ಗ್ರಾಂ ಅರಿಶಿಣ ನಿಮಗೆ ನೀಡುತ್ತೆ ಉತ್ತಮ ಫಲಿತಾಂಶ!! ಕೂಡಲೇ ನಿಮ್ಮ ಹೊಲದಲ್ಲೂ ಅಳವಡಿಸಿಕೊಳ್ಳಿ!! ರೂ.50 ನಲ್ಲಿ ರಾಮಬಾಣ!!
ಯಾವುದೇ ಬೆಳೆ ಬೆಳೆದರು ಅದಕ್ಕೆ ಒಂದಿಲ್ಲ ಒಂದು ರೋಗ ರುಜಿನಗಳು ಪ್ರಾರಂಭವಾಗುತ್ತವೆ. ಇದರಿಂದ ರೈತರಿಗೆ ಉತ್ಪನ್ನದಲ್ಲಿ ಸ್ವಲ್ಪವಾದರೂ ನಷ್ಟವಾಗುತ್ತದೆ ಆದರೆ ಹೀಗೆ ಬೆಳೆ ನಾಶವಾಗದಿರಲು ಅಥವಾ ರೋಗರುಜಿನಗಳಿಂದ ತಪ್ಪಿಸಿಕೊಳ್ಳಲು ಹಾಗೂ ಹೆಚ್ಚಿನ ಇಳುವರಿ ಪಡೆದು ಹೆಚ್ಚಿನ ಆದಾಯ ಗಳಿಸಲು ನಾವಿಂದು ರೈತರಿಗಾಗಿ ಒಂದು ವಿಶೇಷ ಮಿಶ್ರಣವನ್ನು ತಂದಿದ್ದೇವೆ.
ಇದು ನೀವು ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸಾವಯವ ದ್ರಾವಣವಾಗಿದ್ದು ಯಾವುದೇ ಬೆಳಗಾದರೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಬೆಳೆಯನ್ನು ಸದೃಢವಾಗಿ ಬೆಳೆಯಲು ಸಹಾಯಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಳಿಗೆ ಈ ದ್ರಾವಣವನ್ನು ಬಳೆಸುವುದರಿಂದ ಹೆಚ್ಚು ಸದೃಢವಾಗಿ ಬೆಳೆಯುತ್ತವೆ ಹಾಗೂ ಉತ್ತಮ ಫಸಲು ತಂದುಕೊಡುತ್ತದೆ.
ಹಾಗಾದರೆ ಆ ದ್ರಾವಣ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ!
ನಿಮ್ಮ ಬೆಳೆಯನ್ನು ಸದೃಢವಾಗಿ ಮಾಡುವ ಈ ದ್ರಾವಣ ಅರಿಶಿಣ ದ್ರಾವಣ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅರಿಶಿನ ಒಂದು ಕೀಟನಾಶಕ ಗುಣ ಹೊಂದಿರುವ ಔಷಧಿ. ಮನುಷ್ಯರಿಗೆ ಗಾಯವಾದರೂ ಕೂಡ ಅರಿಶಿನವನ್ನು ಬಳಸುತ್ತಾರೆ ಇದು ಅತ್ಯಂತ ಉಪಯೋಗಕಾರಿ ಪದಾರ್ಥವಾಗಿದ್ದು, ಇದನ್ನು ಬೆಳೆಗಳಿಗೆ ಬಳಸುವುದರಿಂದ ಬೆಳಗಳಲ್ಲಿ ಹರಡುವ ರೋಗರೋಜನೆಗಳು ಕಡಿಮೆಯಾಗುತ್ತವೆ ಹಾಗೂ ಬೆಳಗಾವಿಗೆ ಶಕ್ತಿ ತುಂಬಿ ಹೆಚ್ಚು ಫಲವತ್ತಾಗಿ ಬೆಳೆದು ಉತ್ತಮ ಇಳುವರಿ ಕೊಡಲು ಸಹಾಯಮಾಡುತ್ತದೆ.
ಈ ದ್ರಾವಣ ತಯಾರಿಸುವುದು ಹೇಗೆ?
ಈ ದ್ರಾವಣ ತಯಾರಿಸುವುದು ತುಂಬಾ ಸುಲಭವಾಗಿದ್ದು, ಇದನ್ನು ತಯಾರಿಸಲು ಅರಿಶಿಣ ಹಾಗೂ ನೀರು ಮಾತ್ರ ಬೇಕು. 200 ಗ್ರಾಂ ಅರಿಶಿನವನ್ನು ತೆಗೆದುಕೊಂಡು 200 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ದ್ರಾವಣವನ್ನು ಒಂದು ಎಕರೆಗೆ ಬಳಸಬಹುದು.
ನೀವು ಮನೆಯಲ್ಲಿ ತಯಾರಿಸಿದ ಅರಿಶಿಣ ಅಥವಾ ಅಂಗಡಿಯಿಂದ ತಂದ ರೆಡಿಮೇಡ್ ಅರಿಶಿನವನ್ನು ಕೂಡ ಬಳಸಬಹುದು. ಮೊದಲಿಗೆ 200 ಗ್ರಾಂ ಅರಿಶಿನವನ್ನು ಐದರಿಂದ ಹತ್ತು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಈ ಅರಿಶಿನದ ನೀರನ್ನು 200 ಲೀಟರ್ ನೀರಿನ ಡ್ರಮ್ ಗೆ ಹಾಗೆ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಇಂತಿಷ್ಟು ದಿನಗಳವರೆಗೆ ಇಡಬೇಕು ಎಂದೇನಿಲ್ಲ ತಯಾರಿಸಿದ ಕೂಡಲೇ ನೀವು ಬೆಳೆಗಳಿಗೆ ಸಿಂಪಡಿಸಬಹುದು.
ಸಿಂಪಡಿಸುವುದು ಹೇಗೆ?
ಈ ದ್ರಾವಣವನ್ನು ನೀವು ಸ್ಪ್ರಿಂಕ್ಲರ್ ಮೂಲಕ, ಡ್ರಿಪ್ ಮೂಲಕ, ಸ್ಪ್ರೇ ಮೂಲಕ ಅಥವಾ ನೇರವಾಗಿ ನೀರಿನ ಮೂಲಕ ಬೆಳೆಗಳಿಗೆ ಹಾಯಿಸಬಹುದು. ಈ ರೀತಿ ದ್ರಾವಣವನ್ನು ಸಿಂಪಡಿಸಿದ 15 ದಿನಗಳಿಗೆ ಇದರ ಫಲಿತಾಂಶ ತೋರಿಸುತ್ತದೆ. ಬೆಳೆಯು ಹಚ್ಚ ಹಸಿರಾಗಿ ಹುಲಸಾಗಿ ಬೆಳೆದಿರುತ್ತದೆ.
ಸೂಚನೆ:- ಇದನ್ನು ಬೀಜ ಮೊಳಕೆ ಒಡೆದ ಅಥವಾ ಚಿಕ್ಕ ಚಿಕ್ಕ ಸಸಿಗಳಿದ್ದಾಗ ಬಳಸಬಾರದು. ಅರಿಶಿಣ ತುಂಬಾ ಸ್ಟ್ರಾಂಗ್ ಔಷದ. ಆದ್ದರಿಂದ ಬೆಳೆಗಳು ಒಂದು ಹಂತಕ್ಕೆ ಬಂದ ನಂತರದಲ್ಲಿ ಈ ದ್ರಾವಣವನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಬೇರೆಯವರ ಹೊಲದಲ್ಲಿ ಬೆಳೆ ಚೆನ್ನಾಗಿ ಬಂದಿದೆ ಎಂದು ಖಿನ್ನತೆ ಒಳಗಾಗುವ ರೈತರು ಈ ರೀತಿ ಮಾಡಿ ನಿಮ್ಮ ಹೊಲದಲ್ಲಿ ಕೂಡ ಉತ್ತಮ ಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯಬಹುದು ಇದನ್ನೊಮ್ಮೆ ಟ್ರೈ ಮಾಡಿ ಉತ್ತಮ ಫಲಿತಾಂಶ ಪಡೆಯಿರಿ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ