1,000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಅಧಿಸೂಚನೆ! ಪಿಯುಸಿ ಪಾಸ್ ಆದವರು ಅಜಿ೯ ಸಲ್ಲಿಸಿ! ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ರಾಜ್ಯಾದ್ಯಂತ 1000 ಗ್ರಾಮಲೆಕ್ಕಿಗರ(ವಿಎ) ನೇಮಕಾತಿಗೆ ಚಾಲನೆ ದೊರೆತಿದ್ದು, ಇದೀಗ ಗೆಜೆಟ್ ಹೊರಡಿಸಿ ಕೆಇಎ ಮೂಲಕ ಅಜಿ೯ ಆಹ್ವಾನಿಸಲಾಗಿದ್ದು, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಹುದ್ದೆಯ ವಿವರ- ಗ್ರಾಮ ಆಡಳಿತ ಅಧಿಕಾರಿ
ವೇತನ ಶ್ರೇಣಿ- 21400-42000
ಒಟ್ಟು ಹುದ್ದೆಗಳ ಸಂಖ್ಯೆ 1000
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ & ದಾಖಲಾತಿ ಪರಿಶೀಲನೆ
ವಯೋಮಿತಿ:- 18-35 (OBC-38 & SC/ST-40)
ಅರ್ಜಿ ಸಲ್ಲಿಸುವ ಅವಧಿ: 04-03-2024 ರಿಂದ 03-04-2024 ವರೆಗೆ
1. ಶೈಕ್ಷಣಿಕ ವಿದ್ಯಾರ್ಹತೆ
ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ
(ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿ: 27.02.2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.)
*ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
* ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ ಐ ಓ ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಹೆಚ್.ಎಸ್.ಸಿ.
* ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
(ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)
ಪಿಂಚಣಿ ಸೌಲಭ್ಯ: ಪಿಂಚಣಿ ರಹಿತ (NPS).
ಆಯ್ಕೆ ವಿಧಾನ- ಪರೀಕ್ಷೆ ಮೂಲಕ
*ಕಡ್ಡಾಯ ಕನ್ನಡ ಪತ್ರಿಕೆ
*ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ ಹಾಗೂ Negative Valuation ಇರುತ್ತದೆ,
ಈ ಹುದ್ದೆಗಳಿಗೆ ಜಿಲ್ಲಾವಾರು ಆಯ್ಕೆ ನಡೆಯಲಿದ್ದು, ಅಭ್ಯರ್ಥಿಗಳು 2 ಜಿಲ್ಲೆಗೆ ಅಜಿ೯ ಸಲ್ಲಿಸಬಹುದಾಗಿದೆ. ಆದ್ದರಿಂದ ನಾವು ಇಂದು ಬೆಳಗಾವಿ, ಬಾಗಲಕೋಟೆ ವಿಜಯಪೂರ ಹಾಗೂ ಧಾರವಾಡ ಜಿಲ್ಲೆಗಳಿಗೆ ನಿಗದಿಪಡಿಸಿದ ಹುದ್ದೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ.
ಬೆಳಗಾವಿ ಜಿಲ್ಲೆಗೆ ನಿಗದಿಪಡಿಸಿದ ಹುದ್ದೆಗಳ ಮಾಹಿತಿ!
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 64 ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದ್ದು, ಪ್ರವಗ೯ 1- 3 ಸ್ಥಾನ
ಪ್ರವಗ೯ 2ಎ – 10 ಸ್ಥಾನ, ಪ್ರವಗ೯ 2ಬಿ – 3 ಸ್ಥಾನ
ಪ್ರವಗ೯ 3ಎ – 2 ಸ್ಥಾನ, ಪ್ರವಗ೯ 3ಬಿ – 2 ಸ್ಥಾನ
ಪರಿಶಿಷ್ಟ ಜಾತಿ 11 ಸ್ಥಾನ, ಪರಿಶಿಷ್ಟ ಪಂಗಡ 5 ಸ್ಥಾನ, ಸಾಮಾನ್ಯ ಅಭ್ಯರ್ಥಿಗಳಿಗೆ 28 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಗೆ ನಿಗದಿಪಡಿಸಿದ ಹುದ್ದೆಗಳ ಮಾಹಿತಿ!
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 22 ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದ್ದು, ಪ್ರವಗ೯ 1- 1 ಸ್ಥಾನ
ಪ್ರವಗ೯ 2ಎ – 3 ಸ್ಥಾನ, ಪ್ರವಗ೯ 2ಬಿ – 1 ಸ್ಥಾನ
ಪ್ರವಗ೯ 3ಎ – 1 ಸ್ಥಾನ, ಪ್ರವಗ೯ 3ಬಿ – 1 ಸ್ಥಾನ
ಪರಿಶಿಷ್ಟ ಜಾತಿ 3 ಸ್ಥಾನ, ಪರಿಶಿಷ್ಟ ಪಂಗಡ 2 ಸ್ಥಾನ, ಸಾಮಾನ್ಯ ಅಭ್ಯರ್ಥಿಗಳಿಗೆ 10 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ವಿಜಯಪುರ ಜಿಲ್ಲೆಗೆ ನಿಗದಿಪಡಿಸಿದ ಹುದ್ದೆಗಳ ಮಾಹಿತಿ!
ವಿಜಯಪೂರ ಜಿಲ್ಲೆಯಲ್ಲಿ ಒಟ್ಟು 7 ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದ್ದು, ಪ್ರವಗ೯ 1- 1 ಸ್ಥಾನ
ಪ್ರವಗ೯ 2ಎ – 1 ಸ್ಥಾನ,
ಪರಿಶಿಷ್ಟ ಜಾತಿ 1 ಸ್ಥಾನ, ಪರಿಶಿಷ್ಟ ಪಂಗಡ 1 ಸ್ಥಾನ, ಸಾಮಾನ್ಯ ಅಭ್ಯರ್ಥಿಗಳಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಧಾರವಾಡ ಜಿಲ್ಲೆಗೆ ನಿಗದಿಪಡಿಸಿದ ಹುದ್ದೆಗಳ ಮಾಹಿತಿ!
ಧಾರವಾಡ ಜಿಲ್ಲೆಯಲ್ಲಿ ಒಟ್ಟು 12 ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದ್ದು, ಪ್ರವಗ೯ 1- 1 ಸ್ಥಾನ
ಪ್ರವಗ೯ 2ಎ – 1 ಸ್ಥಾನ, ಪ್ರವಗ೯ 2ಬಿ – 1 ಸ್ಥಾನ
ಪರಿಶಿಷ್ಟ ಜಾತಿ 2 ಸ್ಥಾನ, ಪರಿಶಿಷ್ಟ ಪಂಗಡ 1 ಸ್ಥಾನ, ಸಾಮಾನ್ಯ ಅಭ್ಯರ್ಥಿಗಳಿಗೆ 6 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಈ ಮೇಲ್ಕಂಡಂತೆ ಸ್ಥಾನಗಳನ್ನು ಮೀಸಲಿರಿಸಲಾಗಿದ್ದು, ನಿಮಗೆ ಮೀಸಲಾತಿ ದೊರೆಯಬಹುದಾದ ಜಿಲ್ಲೆಗಳಿಗೆ ನೀವು ಅಜಿ೯ ಸಲ್ಲಿಸಬಹುದಾಗಿದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ