ಭತ್ತ ಬಿಟ್ಟು ಕಮಷಿ೯ಯಲ್ ಬೆಳೆ ಬೆಳೆದ ರೈತ! ಆದಾಯ ಹೆಚ್ಚಿ ಆಥಿ೯ಕ ಸಬಲತೆ ಸಾಧಿಸುವ ಮೂಲಕ ಮಾದರಿ!
ಸಾಮಾನ್ಯವಾಗಿ ರಾಜ್ಯ, ದೇಶದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಅಡಕೆಗೆ ಉತ್ತಮ ಬೆಲೆ ಇರುವುದರಿಂದ ರಾಜ್ಯದಲ್ಲಿ ಹೆಚ್ಚಾಗಿ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರು ತಮ್ಮ ಗದ್ದೆಗಳಲ್ಲಿ ಅಡಕೆ ಬೆಳಯುವುದನ್ನು ಕಾಣಬಹುದಾಗಿದೆ.
ಅಲ್ಲದೇ ರಾಜ್ಯ ಸಕಾ೯ರದಿಂದ ಹೊಸದಾಗಿ ಅಡಕೆ ಬೆಳೆಯುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀಡುವ ಅನುದಾನದಿಂದ ಅಡಕೆ ತೋಟ ನಿರ್ಮಾಣ ಹಾಗೂ ವಿವಿಧ ಯೋಜನೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಸುವುದರಿಂದ ಕಡಿಮೆ ನೀರು ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆದು ಹೆಚ್ಚು ಲಾಭ ಪಡೆಯಲು ಸಹಕಾರಿಯಾಗಿದ್ದು, ಇದರಿಂದ ಹೆಚ್ಚಿನ ರೈತರು ಅಡಿಕೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಆದ್ದರಿಂದಲೇ ಅಡಿಕೆ ಈಗ ಬಯಲು ಸೀಮೆಗೂ ವ್ಯಾಪಿಸುತ್ತಿದೆ.
ಮುಂಡಗೋಡ ತಾಲೂಕಿನಲ್ಲಿ ಹಿಂದೆ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದರು. ಆದ್ದರಿಂದ ಅದು ಭತ್ತದ ಕಣಜ ಎಂದೇ ಪ್ರಖ್ಯಾತಿ ಪಡೆದಿತ್ತು. ಆದರೆ, ಪ್ರಸ್ತುತ ಅಲ್ಲಿನ ರೈತರು ಭತ್ತ ಬೆಳೆಯುವುದಕ್ಕೆ ಹಿಂದೇಟು ಹಾಕುತ್ತಿದ್ದು, ಆರ್ಥಿಕ ಬೆಳೆಗಳತ್ತ ಮುಖ ಮಾಡಿದ್ದಾರೆ.
ಏಕೇಂದರೆ ಭತ್ತ ಬೆಳೆಯಲು ಅಧಿಕ ವೆಚ್ಚವಾಗುತ್ತದೆ ಆದರೆ ಇಳುವರಿ ಕಡಿಮೆಯಾಗಿ ರೈತರಿಗೆ ಯಾವುದೇ ಲಾಭ ಸಿಗುವುದಿಲ್ಲ. ಇದರಿಂದಾಗಿ ಭತ್ತದ ಕೃಷಿ ಕುಂಠಿತವಾಗಿದ್ದು, ಬದಲಾಗಿ ವಾಣಿಜ್ಯ ಬೆಳೆಗಳಾದ ಅಡಕೆ, ಕಬ್ಬು, ಮೆಕ್ಕೆಜೋಳ, ಪಪ್ಪಾಯಿ, ಕಾಳು ಮೆಣಸು, ಬಾಳೆ, ಗೇರು ಹಾಗೂ ಶುಂಠಿ ಬೆಳೆಗಳನ್ನು ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ. ಇದರಿಂದ ರೈತರ ಆರ್ಥಿಕ ಸ್ಥಿತಿಯು ಸುಧಾರಿಸುತ್ತಿದ್ದು, ರೈತರು ಆದಾಯ ಗಳಿಸುತ್ತಿದ್ದಾರೆ.
ರೈತರ ಪಾಲಿಗೆ ಸಿಹಿ ತಂದ ಕಬ್ಬು!
ರೈತರಿಗೆ ಸಹಕಾರಿಯಾಗುವಂತೆ ಅಲ್ಲಿನ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಕಳೆದ ಒಂದು ವರ್ಷದ ಹಿಂದೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದು, ಆಗಿನಿಂದ ಕಬ್ಬು ಕೃಷಿ ಹೆಚ್ಚಾಗಿದೆ. ತಾಲೂಕಿನ ಹತ್ತಿರದಲ್ಲೆ ಕಬ್ಬಿನ ಕಾರ್ಖಾನೆ ಇರುವುದರಿಂದ ಸಾಗಣೆ ವೆಚ್ಚವು ಕಡಿಮೆಯಾಗುತ್ತದೆ ಎಂದು ರೈತರು ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಉತ್ತಮ ಲಾಭ ಪಡೆಯುವ ಮೂಲಕ ಆರ್ಥಿಕ ಸಿಹಿ ಪಡೆಯುವ ಉತ್ಸಾಹದಲ್ಲಿದ್ದಾರೆ.
ರೈತರು ಸಾಂಪ್ರದಾಯಿಕ ಕೃಷಿ ಹಾಗೂ ಒಂದೇ ಕೃಷಿ ಮಾಡುತ್ತಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಆರ್ಥಿಕವಾಗಿ ಸದೃಢವಾಗಲು ಸಮಗ್ರ ಹಾಗೂ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದ್ದು, ತಾಲೂಕಿನ ಹತ್ತಿರದಲ್ಲಿಯೆ ಕಬ್ಬಿನ ಕಾರ್ಖಾನೆ ಆಗಿರುವುದರಿಂದ ಕಬ್ಬು ಕೃಷಿ ಮಾಡಿ ಇದರ ಸಾಗಣೆ ವೆಚ್ಚವು ಕಡಿಮೆಯಾಗುವುದರಿಂದ ನಿಮಗೆ ಸಿಗುವ ಲಾಭಾಂಶವು ಹೆಚ್ಚಾಗಿದೆ ಎಂದು ಹುಲಿಹೊಂಡದ ರೈತ ಬಸವರಾಜ ನಡುವಿನಮನಿ ಹೇಳಿದ್ದಾರೆ.
ಮುಂಡಗೋಡ ತಾಲ್ಲೂಕಿನಲ್ಲಿ ವಿವಿಧ ಬೆಳೆ ಬೆಳೆದಿರುವ ಕ್ಷೇತ್ರದ ವಿವರ:-
ಕ್ಷೇತ್ರ (ಹೆಕ್ಟರ್‌ಗಳಲ್ಲಿ)
*ಅಡಕೆ 2885
*ಕಬ್ಬು 1280
*ಮೆಕ್ಕೆಜೋಳ 4635
*ಬಾಳೆ 840
ಈ ಬಗ್ಗೆ ಮಾತನಾಡಿರುವ ಮುಂಡಗೋಡ ತಾಲ್ಲೂಕಿನ ಸಹಾಯಕ ಕೃಷಿ ನಿದೇ೯ಶಕರಾದ ಎಮ್.ಎಸ್. ಕುಲಕರ್ಣಿ ರವರು ಮಳೆಯ ಪರಿಸ್ಥಿತಿಗನುಸಾರವಾಗಿ ರೈತರು ವಾರ್ಷಿಕ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ರೈತರಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮನವರಿಕೆ ಮಾಡಿಕೊಡಲಾಗುತ್ತಿದೆ. ಸಮಗ್ರ ಕೃಷಿ ಸಂಕಷ್ಟದ ಸ್ಥಿತಿಯಲ್ಲೂ ರೈತರಿಗೆ ಲಾಭದಾಯಕವಾಗುವುದಲ್ಲದೆ ರೈತರು ಅರ್ಥಿಕವಾಗಿ ಸಾವಲಂಬಿಯಾಗಲು ಸಹಾಯವಾಗುತ್ತದೆ. ಒಂದು ಬೆಳೆ ನಷ್ಟವಾದರೂ ಇನ್ನೊಂದು ಬೆಳೆಯಲ್ಲಿ ಆದಾಯ ಬರುತ್ತದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ