ನಿಮ್ಮ ಜಮೀನು ಅಕ್ಕಪಕ್ಕದವರಿಂದ ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸುವುದು ಹೇಗೆ?
ಸಾಮಾನ್ಯವಾಗಿ ಕೆಲ ವಷ೯ಗಳಿಗೊಮ್ಮೆ ಜಮೀನಿನ ಸವೆ೯ ಮಾಡಿಸುವುದು ಅವಶ್ಯಕ. ಏಕೆಂದರೆ ಇದರಿಂದ ದಾಖಲೆಗಳಲ್ಲಿ ಆದ ಬದಲಾವಣೆಗಳನ್ನು ಸೇರಿಸಬಹುದು ಹಾಗೂ ಅಕ್ಕ-ಪಕ್ಕದವರು ಜಮೀನನ್ನು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಿ ನಮ್ಮ ಜಮೀನನ್ನು ನಾವು ಪಡೆಯಬಹುದು.
ಹೀಗೆ ಜಮೀನು ಒತ್ತುವರಿ ಆಗಿದ್ದು ಗೊತ್ತಾಗಬೇಕಾದರೆ ಜಮೀನಿನ ಹದ್ದುಬಸ್ತು ಮಾಡಿಸಬೇಕು. ಹದ್ದುಬಸ್ತು ನಮ್ಮ ಜಮೀನು ಪಕ್ಕದವರಿಗೆ ಒತ್ತುವರಿ ಆಗಿದ್ದು ಕಂಡುಬಂದಲ್ಲಿ, ಕ೨ನೂನಿನ ಮೂಲಕ ನಾವು ಮರಳಿ ನಮ್ಮ ಒತ್ತುವರಿ ಜಮೀನನ್ನು ಹಿಂಪಡೆಯಬಹುದು. ಅದಕ್ಕಾಗಿ ಹದ್ದುಬಸ್ತು ಮಾಡಿಸುವಾಗ ಜಮೀನು ಒತ್ತುವರಿಯಾಗಿದ್ದರೆ ಈ ಕುರಿತು ಸರ್ವೇಯರ್ ಸ್ಕೆಚ್ ಪ್ರತಿ ನೀಡಿದಾಗ ಅದು ಕಾನೂನು ಬದ್ಧವಾದ ಅಳತೆಯಾಗಿದೆ ಎಂದು ಕರ್ನಾಟಕ ಲ್ಯಾಂಡ್ ರೆವೆನ್ಯೂ ರೂಲ್ಸ್ 1966 ನಲ್ಲಿ ತಿಳಿಸಲಾಗಿದೆ. ಅದರಿಂದ ಒಬ್ಬ ಸರ್ವೇಯರ್ ಹದ್ದುಬಸ್ತು ಸ್ಕೆಚ್ ಅನ್ನು ಕಾನೂನು ಬದ್ಧವಾಗಿ ನೀಡುತ್ತಾನೆ.
ಅಕ್ಕಪಕ್ಕದವರಿಗೆ ನೋಟಿಸ್!
ಹದ್ದುಬಸ್ತು ಅಳತೆ ಮಾಡಿಸುವಾಗ ಅನೇಕ ಬಾರಿ ಅರ್ಜಿದಾರ ಅಕ್ಕ-ಪಕ್ಕದಲ್ಲಿ ಇರುವ ಜಮೀನುದಾರರಿಗೆ ನೋಟಿಸು ಕೊಡುವುದಿಲ್ಲ. ಏಕೆಂದರೆ ಅವರಿಗೆ ನೋಟಿಸು ಕೊಡಲು ಕಾನೂನಾತ್ಮಕವಾಗಿ ಹಣ ಕಟ್ಟಬೇಕಾಗುತ್ತದೆ. ಆದರೆ ಹೀಗೆ ಪಕ್ಕದ ಜಮೀನಿನವರಿಗೆ ನೋಟಿಸು ಕೊಡದೇ ಜಮೀನು ಅಳತೆ ಮಾಡಿಸಬಾರದು. ನೀವು ಅವರಿಗೆ ಕೊಟ್ಟ ನೋಟಿಸ್ ಗೆ ಅವರು ಉತ್ತರ ಕೊಡಬಹುದು ಅಥವಾ ಅಳತೆ ಮಾಡುವಾಗ ಸಹಕರಿಸದೇ ಇರಬಹುದು ಅಥವಾ ಅಳತೆ ಮಾಡಲು ಬರಬಹುದು ಎಂದು ಅವರು ಉತ್ತರ ಕೊಡಬಹುದು.
ನೀವು ನೋಟಿಸ್ ಕೊಟ್ಟ ಮೇಲೆ ಒಂದು ವೇಳೆ ಪಕ್ಕದ ಜಮೀನಿನವರು ನೋಟಿಸು ಪಡೆದುಕೊಂಡು ಅಳತೆ ಮಾಡುವಾಗ ಬರದಿದ್ದರೆ ಅದು ಅವರ ತಪ್ಪಾಗುತ್ತದೆ.
*ಇನ್ನು ಹದ್ದುಬಸ್ತು ಸರ್ವೆಯಲ್ಲಿ ಕೇವಲ ನಿಮ್ಮ ಜಮೀನಿನಲ್ಲಿ ಮಾತ್ರ ಸವೆ೯ ಮಾಡಲಾಗುತ್ತದೆ. *ಪಕ್ಕದ ಜಮೀನಿನಲ್ಲಿ ಸರ್ವೆ ಅಳತೆ ಮಾಡುವುದಿಲ್ಲ. *ಯಾರು ಅರ್ಜಿ ಕೊಟ್ಟಿದ್ದಾರೆಯೋ ಅವರ ಹೆಸರಿನಲ್ಲಿ ಪಹಣಿ ಪತ್ರ ಇರಬೇಕು.
*ಜಮೀನಿನ ಖಾತೆ ಹೊಂದಿರಬೇಕು.
*ಅವರ ಜಮೀನಿನ ಗಡಿಯನ್ನು ಟಿಪ್ಪಣಿ ಪ್ರಕಾರದಲ್ಲಿ ಅಥವಾ ಬೇರೆ ವಿಧಾನದಲ್ಲಿ ಸರ್ವೆ ಮಾಡುತ್ತಾರೆ. *ಒತ್ತುವರಿಯಾದ ಬಗ್ಗೆ ಸ್ಕೆಚ್ ಕೊಟ್ಟಾಗ ಒತ್ತುವರಿಯನ್ನು ಬಿಡಿಸಿಕೊಡುವ ಅಧಿಕಾರ ಸರ್ವೆಯರಿಗೆ ಇರುವುದಿಲ್ಲ.
ಸವೆ೯ ನಂತರ ಏನು ಮಾಡಬೇಕು?
*ನಿಮ್ಮ ಜಮೀನಿನ ಅಳತೆ ಮಾಡಿದ ಸರ್ವೇಯರ್ ಮಾಡಿದ ಸ್ಕೆಚ್ ಸರಿಯಿಲ್ಲ ಎಂದು ನಿಮಗೆ ಕೊಟ್ಟವನಿಗೆ ಅನಿಸಿದರೆ ಎ.ಡಿ.ಎಲ್.ಆರ್.ಗೆ ಅಪೀಲ್ ಹೋಗಬಹುದು.
*ನಂತರ ಎ.ಡಿ.ಎಲ್. ಆರ್. ದಿಂದ ಡಿ.ಡಿ.ಎಲ್.ಆರ್.ಗೂ ಕೂಡ ಅಪೀಲ್ ಹೋಗಬಹುದು.
*ಪಕ್ಕದ ಜಮೀನಿನವರು ನಿಮ್ಮ ಒತ್ತುವರಿ ಜಮೀನನ್ನು ಬಿಟ್ಟು ಕೊಡಲು ಒಪ್ಪಿಜರೆ ಸರಿ. ಒಪ್ಪದೇ ಇದ್ದಲ್ಲಿ ಸಿವಿಲ್ ಕೋರ್ಟ್ ನಲ್ಲಿ ಇಂಜಕ್ಷನ್ ಅರ್ಜಿ ಸಲ್ಲಿಸಬೇಕು.
*ನಂತರ ಕೋರ್ಟ್ ಮುಖಾಂತರ ಮತ್ತೊಮ್ಮೆ ಸರ್ವೆ ಮಾಡಿಸಬಹುದು.
ಆದರೆ ಯಾವುದೇ ವ್ಯಾಜ್ಯ ತೆಗೆದುಕೊಂಡು ನೀವು ಕೊಟ್೯ ಗೆ ಹೋದರೆ ಕೋರ್ಟ್ ಕೇಸ್ ಗಳು ಸುಲಭದಲ್ಲಿ ಕಡಿಮೆ ಸಮಯದಲ್ಲಿ ಬಗೆಹರಿಸಲು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತು. ಆದ್ದರಿಂದ ಸಾದ್ಯವಾದಷ್ಟು ಅರ್ಜಿದಾರರು ಹಾಗೂ ಒತ್ತುವರಿದಾರರು ತಮ್ಮ ತಮ್ಮಲ್ಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು.
ಮೊಬೈಲ್ ನಲ್ಲೇ ಸಿಗುತ್ತೆ ನಿಮ್ಮ ಜಮೀನು ಹಾಗೂ ಗ್ರಾಮದ ನಕ್ಷೆ!
ಅದಕ್ಕಾಗಿ ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://landrecords.karnataka.gov.in/service3/
* ನಂತರದಲ್ಲಿ ಇಲ್ಲಿ ನಿಮ್ಮ ಜಿಲ್ಲೆ- ತಾಲ್ಲುಕು-ಹೋಬಳಿ-ಗ್ರಾಮವನ್ನು ಆಯ್ಕೆ ಮಾಡಿ
* “Map Type” ಆಯ್ಕೆಯಲ್ಲಿ “Cadastral Map” ಮೇಲೆ ಕ್ಲಿಕ್ ಮಾಡಿ
*ಆಗ ನಿಮ್ಮ ಹಳ್ಳಿಯ ಗಣಕೀಕೃತ ನಕ್ಷೆ ಡೌನ್ಲೋಡ್ ಅಗುತ್ತದೆ
*ಇಲ್ಲಿ ನಿಮ್ಮ ಗ್ರಾಮ ಗಡಿ ರೇಖೆ, ಬಂಡಿ ದಾರಿ, ಕಾಲು ದಾರೆ, ಹಳ್ಳ, ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ, ಬಾವಿ, ಬದುಗಳು, ಹೀಗೆಯೆ ಹಲವು ಮಾಹಿತಿಯುಳ್ಳ ನಕ್ಷೆಯನ್ನು ಕೆಲವೆ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.
ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ
ಕಂದಾಯ ಇಲಾಖೆಯ ಇ-ಸೇವೆಗಳ ಅಧಿಕೃತ ವೆಬೈಟ್ ಲಿಂಕ್ ಈ ಕೆಳಗೆ ಕೊಡಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ ಅಥವಾ ಈ ಕೆಳಗಿನ ಫೋನ್ ನಂಬರ್ ಗಳಿಗೆ ಸಂಪಕಿ೯ಸಿ ಮಾಹಿತಿ ಪಡೆಯಬಹುದು.
https://landrecords.karnataka.gov.in/indexkn.aspx
ಫೋನ್ ನಂಬರ್:- 080-22113255, 8277864065,8277864067, 8277864068
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ