You are currently viewing ಬಿಜೆಪಿ ದಳದ ಮಾಸ್ಟರ್ ಪ್ಲಾನ್ ವಕ್೯ ಆಗುತ್ತಾ! 5 ನೇ ಅಭ್ಯರ್ಥಿ ಕಣಕ್ಕಿಳಿಸಲು ಮೈತ್ರಿ ಪಕ್ಷಗಳ ಕಸರತ್ತು! 

ಬಿಜೆಪಿ ದಳದ ಮಾಸ್ಟರ್ ಪ್ಲಾನ್ ವಕ್೯ ಆಗುತ್ತಾ! 5 ನೇ ಅಭ್ಯರ್ಥಿ ಕಣಕ್ಕಿಳಿಸಲು ಮೈತ್ರಿ ಪಕ್ಷಗಳ ಕಸರತ್ತು! 

ಬಿಜೆಪಿ ದಳದ ಮಾಸ್ಟರ್ ಪ್ಲಾನ್ ವಕ್೯ ಆಗುತ್ತಾ! 5 ನೇ ಅಭ್ಯರ್ಥಿ ಕಣಕ್ಕಿಳಿಸಲು ಮೈತ್ರಿ ಪಕ್ಷಗಳ ಕಸರತ್ತು! 

ಕನಾ೯ಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷವಾದ ಬಿಜೆಪಿ ರಾಜಕೀಯ ಬದ್ಧ ವೈರಿಗಳು ಹಾಗೆಯೇ ಜನತಾದಳ ಕೂಡ ಕಾಂಗ್ರೆಸ್ ವಿರುದ್ಧವಾಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಹೀನಾಯ ಸೋಲು ಕಂಡಿರುವ ಎರಡು ಪಕ್ಷಗಳು ವೈರಿಯ ವೈರಿ ಮಿತ್ರ ಎನ್ನುವುದನ್ನು ಸಾಭೀತುಪಡಿಸುವಂತೆ ಬಿಜೆಪಿ ಹಾಗೂ ಜನತಾದಳ ಈಗ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಎದುರಿಸುವ ತಂತ್ರ ಹೂಡುತ್ತಿವೆ. ಹೌದು ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮೂಲಕವೇ ಸ್ಪಧೆ೯ ಮಾಡುವುದಾಗಿ ಹೇಳಿಕೊಂಡಿವೆ.

ಅಷ್ಟೇ ಅಲ್ಲದೇ ಇದೇ ಫೆಬ್ರವರಿ 27 ರಂದು ರಾಜ್ಯಸಭೆಯಲ್ಲಿ ಖಾಲಿಯಿರುವ ನಾಲ್ಕು ಸ್ಥಾನಗಳಿಗೆ  ಚುನಾವಣೆ ನಡೆಯಲಿದ್ದು, ಅಲ್ಲೂ ಕೂಡ ಈ ಮೈತ್ರಿ ಮುಂದುವರೆಯುವುದು ಎನ್ನಲಾಗುತ್ತಿದೆ.

ರಾಜ್ಯಸಭೆಯ ಪ್ರತಿನಿಧಿಗಳಲ್ಲಿ ಪ್ರತಿ 2 ವಷ೯ಕ್ಕೊಮ್ಮೆ 1/3 ಪ್ರತಿನಿಧಿಗಳ ಅಧಿಕಾರಾವಧಿ ಮುಗಿಯುತ್ತದೆ. ಅದರಂತೆ ಪ್ರಸ್ತುತವಾಗಿ ರಾಜ್ಯಸಭಾ ಪ್ರತಿನಿಧಿಗಳಾದ ರಾಜೀವ್ ಚಂದ್ರಶೇಖರ್, ಜಿ.ಸಿ ಚಂದ್ರಶೇಖ‌ರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರ ಅವಧಿ ದಿನಾಂಕ: 02-04- 2024 ಕ್ಕೆ ಕೊನೆಗೊಳ್ಳಲಿದ್ದು, ಖಾಲಿಯಾಗುವ 4 ಸ್ಥಾನಗಳಿಗೆ ಈ ಚುನಾವಣೆ ಫೆಬ್ರವರಿ 27 ರಂದು ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ.

ಇನ್ನು ಈ ಸ್ತಾನಗಳು ವಿವಿಧ ಪಕ್ಷಗಳ ಬಲಾಬಲದ ಮೇಲೆಯೇ ನಿಧಾ೯ರವಾಗುತ್ತದೆ. ಹಾಗೆ ನೋಡುವುದಾದರೆ ಆಡಳಿತ ರೂಢ ಕಾಂಗ್ರೆಸ್ ಗೆ 4 ರಲ್ಲಿ ಮೂರು ಸ್ಥಾನಗಳು ಬರುವುದು ಖಚಿತ. ಉಳಿದಂತೆ ಕಾಂಗ್ರೆಸ್ ಬಿಟ್ಟರೆ ಹೆಚ್ಚಿನ ಬಲ ಹೊಂದಿರುವುದು ಬಿಜೆಪಿ. ಹಾಗಾಗಿ ಅದು ಕೂಡ 1 ಸ್ಥಾನವನ್ನು ಪಡೆದುಕೊಳ್ಳುತ್ತದೆ ಎಂಬುದು ಈಗಾಗಲೇ ಗೊತ್ತಿರುವ ವಿಷಯ.

ಆದರೆ ಚುನಾವಣಾ ಕಾವು ಹೆಚ್ಚಾಗುವಂತೆ ಮಾಡಲು  ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ನಿಧ೯ರಿಸಿರುವ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಐದನೇ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಮೂಲಕ ವೋಟು ಒಡೆಯುವ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ರೀತಿ ಪ್ಲಾನ್ ನಲ್ಲಿ ಮೇನ್ ರೋಲ್ ಮಾಡುತ್ತಿರುವುದು ಅಂದರೆ ರಾಜ್ಯಸಭಾ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯಾಗಿ ಸ್ಪಧಿ೯ಸುತ್ತಿರುವುದು ಜೆಡಿಎಸ್‌ನ ಕುಪೇಂದ್ರ ರೆಡ್ಡಿ.

ಮೊದಲಿಗೆ ಈ ಸ್ಥಾನಕ್ಕೆ  ಮಾಜಿ ಸಚಿವರಾದ ಬಿಜೆಪಿಯ ವಿ ಸೋಮಣ್ಣ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪಧಿ೯ಸಿ ಸೋತಿದ್ದರು. ಆದ್ದರಿಂದ ರಾಜ್ಯಸಭೆ ಚುನಾವಣಾ ಕಣಕ್ಕಿಳಿಸುವ ಕುರಿತು ಚಿಂತನೆ ಮಾಡಲಾಗಿತ್ತು. ವಿ ಸೋಮಣ್ಣ ಅವರು ಲಿಂಗಾಯತರಾಗಿದ್ದು, ಅವರನ್ನು ಕಣಕ್ಕಿಳಿಸಿದರೆ ಲಿಂಗಾಯತ ಮತಗಳನ್ನು ಅಡ್ಡ ಮತದಾನ ಮಾಡಿಸಬಹುದು ಎಂಬ ಲೆಕ್ಕಾಚಾರವನ್ನು ಕಮಲ-ದಳ ನಾಯಕರು ಮಾಡಿದ್ದರು. ಆದರೆ ಮಾಜಿ ಸಚಿವರಾದ ವಿ ಸೋಮಣ್ಣ ಅವರು ರಾಜ್ಯಸಭೆಗೆ ಸ್ಪಧಿ೯ಸಲು ತಿರಸ್ಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆದ್ದರಿಂದ ಎರಡು ಪಕ್ಷಗಳ ನಾಯಕರು ಚಚಿ೯ಸಿ  ಒಮ್ಮತದ ಮೇರೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್ ನ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಕ್ಷಗಳ ಬಲಾಬಲ ಎಷ್ಟು! 

ಪಕ್ಷಗಳ ಬಲಾಬಲ ನೋಡುವುದಾದರೆ  ಆಡಳಿತರೂಢ ಕಾಂಗ್ರೆಸ್ 135 ಶಾಸಕರನ್ನು ಹೊಂದಿದೆ. ಬಿಜೆಪಿ 66, ಜೆಡಿಎಸ್ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇದ್ದಾರೆ. ಈ ಪಕ್ಷೇತರರಲ್ಲಿ ದರ್ಶನ್, ಲತಾ, ಪುಟ್ಟಸ್ವಾಮಿ ಈಗಾಗಲೇ ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಂಡಿದ್ದು, ಅವರ ವೋಟುಗಳು ಕಾಂಗ್ರೆಸ್ ಗೆ ಹೋಗುತ್ತವೆ. ಇನ್ನು ಉಳಿದಿರುವ ಜನಾರ್ದನ ರೆಡ್ಡಿ ಆರಂಭದಲ್ಲಿ ಕಾಂಗ್ರೆಸ್ ಜೊತೆಗಿದ್ದು, ಇತ್ತೀಚೆಗೆ, ಬಿಜೆಪಿ ಕಡೆಗೆ ಗುರುತಿಸಿಕೊಳ್ಳುತ್ತಿದ್ದಾರೆ.

ಗೆಲ್ಲಲು ಬೇಕು 45 ವೋಟು ಬೇಕು ! 

ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯು  ಗೆಲ್ಲಬೇಕಾದರೆ ಒಟ್ಟು 45 ಮತಗಳು ಬೇಕು. ಬಿಜೆಪಿಗೆ ಇರುವ ಬಲದಲ್ಲಿ 1 ಸ್ತಾನ ಗೆದ್ದು, 21 ಹೆಚ್ಚುವರಿ ಮತಗಳಿವೆ ಹಾಗೂ ಜೆಡಿಎಸ್‌ನ 19, ಪಕ್ಷೇತರ 2 ಮತ್ತು ಕೆಆರ್‌ಪಿಪಿ, ಸರ್ವೋದಯ ಕರ್ನಾಟಕದ ತಲಾ ಒಂದು ಮತಗಳನ್ನು ಪಡೆದರೆ  44 ಮತಗಳಾಗುತ್ತವೆ. ಇನ್ನು ಒಂದು ವೋಟಿಗಾಗಿ ಕಾಂಗ್ರೆಸ್ ನ ಅಸಮಾಧಾನಿತ ನಾಯಕರಿಗೆ ಬಲೆ ಹಾಕಿ ಅಡ್ಡ ಮತದಾನ ಮಾಡಿಸುವ ಮೂಲಕ ಗೆಲುವು ಸಾಧಿಸಬಹುದಾಗಿದ್ದು, ಇದೇ ಲೆಕ್ಕಾಚಾರ ಹಾಕಿಕೊಂಡಿರುವ ಕಮಲ-ದಳ ನಾಯಕರು 5 ನೇ ಅಭ್ಯರ್ಥಿಯನ್ನು ಚುನಾವಣಾ

ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಇದೇ 27 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ದಳದ ಈ ಪ್ಲಾನ್ ಎಷ್ಟರ ಮಟ್ಟಿಗೆ. ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಿದೆ. ಮುದಿನ ಲೋಕಸಭೆಯಲ್ಲೂ ಕೂಡ ಇದೇ ಮೈತ್ರಿ ಮುಂದುವರೆಸಿ ಸ್ಥಾನಗಳನ್ನು ಎರಡು ಪಕ್ಷಗಳು ಹಂಚಿಕೆ ಮಾಡಿಕೊಂಡು ಸ್ಪಧೆ೯ ಮಾಡುತ್ತಿವೆ.

ಧನ್ಯವಾದಗಳು

****** ಅಂತ್ಯ ******

ರೈತರ ಸೇವೆಯಲ್ಲಿ ನಿಮ್ಮ vkkrushi.com 💚

   ಪರಿಸರ ಪರಿಸರದೊಂದಿಗೆ ವಿಕೆ
   ಆರ್ಥಿಕತೆ

Leave a Reply