You are currently viewing BJP-JDS List :: ಲೋಕಸಭಾ ಸಮರಕ್ಕೆ ದಿಗ್ಗಜರ ಸಂಭಾವ್ಯ ಲಿಸ್ಟ್ ! ಯಾರು ಯಾವ ಕ್ಷೇತ್ರಕ್ಕೆ ಸ್ಪಧೆ೯! 

BJP-JDS List :: ಲೋಕಸಭಾ ಸಮರಕ್ಕೆ ದಿಗ್ಗಜರ ಸಂಭಾವ್ಯ ಲಿಸ್ಟ್ ! ಯಾರು ಯಾವ ಕ್ಷೇತ್ರಕ್ಕೆ ಸ್ಪಧೆ೯! 

BJP-JDS List :: ಲೋಕಸಭಾ ಸಮರಕ್ಕೆ ದಿಗ್ಗಜರ ಸಂಭಾವ್ಯ ಲಿಸ್ಟ್ ! ಯಾರು ಯಾವ ಕ್ಷೇತ್ರಕ್ಕೆ ಸ್ಪಧೆ೯! 

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸೋತು ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಈ ಬಾರಿಯ ಲೋಕಸಭೆಯಲ್ಲಿ ಹಿಂದಿನ ಬಾರಿ ಗೆದ್ದ ಕ್ಷೇತ್ರಗಳನ್ನು ಕಳೆದುಕೊಳ್ಳಲು ತಯಾರಿಲ್ಲ. ಆದ್ದರಿಂದಲೇ ಈ ಬಾರಿ  ಜಾಣನಡೆ ಪ್ರದಶಿ೯ಸುತ್ತಿರುವ ಬಿಜೆಪಿ ನಾಯಕರು ಹೈಕಮಾಂಡ್ ಆದೇಶದಂತೆ ಜೆಡಿಎಸ್ ನೊಂದಿಗೆ ಮೈತ್ರಿ ಕಹಳೆ ಮೊಳಗಿದ್ದಾರೆ. ಹೇಗಾದರೂ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಕಮಲ-ದಳ ನಾಯಕರು ಮೈತ್ರಿ ಅಸ್ತ್ರ ಪ್ರಯೋಗಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಬಹುತೇಕ ಕ್ಷೇತ್ರ ಹಂಚಿಕೆ ಅಂತಿಮವಾಗಿದ್ದು, ಆದರೆ ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಈಗಾಗಲೇ ಲೋಕಸಭಾ ಚುನಾವಣಾ ತಯಾರಿ ಹಾಗೂ ಕ್ಷೇತ್ರ ಹಂಚಿಕೆ ಕುರಿತು ಬಿಜೆಪಿಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದು, ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪಧಿ೯ಸಲಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ಪಕ್ಷವೂ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಕೇಳಿದ್ದು, ಆದರೆ, ಬಿಜೆಪಿ ಹೈಕಮಾಂಡ್ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಮಾತ್ರ  ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಗಳು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ತಯಾರಿಲ್ಲ. ಹಾಗೂ ಮೈತ್ರಿಯು ಯಶಸ್ವಿಯಾಗಿ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲಬೇಕಾದರೆ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎನ್ನುವುದು ಬಿಜೆಪಿ ಹೈಕಮಾಂಡ್ ನಿಧಾ೯ರವಾಗಿದೆ. ಆದ್ದರಿಂದ ಕೇವಲ 4 ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ನಿಧ೯ರಿಸಿದೆ.

ಬಿಜೆಪಿ ಹಾಗೂ ಜೆಡಿಎಸ್ ನ ಸಂಭವನೀಯ ಅಭ್ಯರ್ಥಿಗಳು ಯಾರು? 

*ಬೆಂಗಳೂರು ಕೇಂದ್ರ: ಪಿ ಸಿ ಮೋಹನ್

*ತುಮಕೂರು: ವಿ ಸೋಮಣ್ಣ ಅಥವಾ, ಮಾಧುಸ್ವಾಮಿ

*ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

*ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ

*ಮೈಸೂರು: ಪ್ರತಾಪ್‌ ಸಿಂಹ

*ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್‌, ಕೊಳ್ಳಗಾಲ ಎನ್ ಮಹೇಶ್

*ಚಿಕ್ಕಮಗಳೂರು: ಸಿ ಟಿ ರವಿ

*ದಾವಣಗೆರೆ: ಜಿ ಎಂ ಸಿದ್ದೇಶ್ವ‌ರ್

*ಶಿವಮೊಗ್ಗ: ಬಿ ವೈ ರಾಘವೇಂದ್ರ

*ಹಾವೇರಿ: ಬಿ ಸಿ ಪಾಟೀಲ್, ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್

*ಚಿಕ್ಕಬಳ್ಳಾಪುರ: ಡಾ. ಕೆ ಸುಧಾಕರ್ ಅಥವಾ ಅಲೋಕ್ ವಿಶ್ವನಾಥ್

*ಉತ್ತರ ಕನ್ನಡ: ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ

*ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್

*ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ

*ಚಿತ್ರದುರ್ಗ: ಎ ನಾರಾಯಣಸ್ವಾಮಿ

*ಬಾಗಲಕೋಟೆ: ಪಿ. ಸಿ. ಗದ್ದಿಗೌಡರ್

*ಬಳ್ಳಾರಿ: ಶ್ರೀರಾಮುಲು

*ಕೊಪ್ಪಳ: ಕರಡಿ ಸಂಗಣ್ಣ

*ವಿಜಯಪುರ: ರಮೇಶ್ ಜಿಗಜಿಣಗಿ

*ಕಲಬುರ್ಗಿ: ಉಮೇಶ್ ಜಾದವ್

*ಕೋಲಾರ: ಮುನಿಸ್ವಾಮಿ

*ಬೆಳಗಾವಿ: ಜಗದೀಶ್‌ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟ‌ರ್

*ಬೀದ‌ರ್ : ಭಗವಂತ್ ಖೂಬಾ

*ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆ ಅಥವಾ ರಮೇಶ್ ಕತ್ತಿ

*ರಾಯಚೂರು : ರಾಜಾ ಅಮರೇಶ್ವರ

ಜೆಡಿಎಸ್ ಸ್ಪಧಿ೯ಸುತ್ತಿರುವ ಲೋಕಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿಗಳು

*ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್

*ಮಂಡ್ಯ: ಹೆಚ್ ಡಿ ಕುಮಾರಸ್ವಾಮಿ

*ಹಾಸನ: ಪ್ರಜ್ವಲ್ ರೇವಣ್ಣ

ಇದು ಕೇವಲ ಸಂಭಾವ್ಯ ಪಟ್ಟಿಯಾಗಿದ್ದು, ಪಕ್ಷಗಳು ಅಧಿಕೃತವಾಗಿ ಇನ್ನು ಪ್ರಕಟಿಸಿಲ್ಲ. ಆದ್ದರಿಂದ ಇದರಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಧನ್ಯವಾದಗಳು

****** ಅಂತ್ಯ ******

ರೈತರ ಸೇವೆಯಲ್ಲಿ ನಿಮ್ಮ vkkrushi.com 💚

   ಪರಿಸರ ಪರಿಸರದೊಂದಿಗೆ ವಿಕೆ
   ಆರ್ಥಿಕತೆ

Leave a Reply