Crop Insurance :: ಮಾರ್ಚ್ ತಿಂಗಳಿನ ಒಳಗೆ 13 ಲಕ್ಷ ರೈತರ ಖಾತೆಗೆ ಜಮೆಯಾಗಲಿದೆ 1400 ಕೋಟಿ ಬೆಳೆ ಪರಿಹಾರ ಮೊತ್ತ! ನಿಮಗೂ ಬಂದಿರಬಹುದು ಚೆಕ್ ಮಾಡಿಕೊಳ್ಳಿ!
ನಾವು ಈಗಾಗಲೇ ನಿಮಗೆ ತಿಳಿಸಿರುವಂತೆ ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿ ಬೆಳೆ ಹಾನಿಯಾಗಿದೆ. ಆದ್ದರಿಂದ ಪಿಎಂ ಫಜಲ್ ಭೀಮಾ ಯೋಜನೆ ( pradhan mantri fasal bima yojana ) ಅಡಿಯಲ್ಲಿ ವಿಮೆ ಮಾಡಿಸಿದ ರೈತರಿಗೆ ಈಗಾಗಲೇ ಬೆಳೆ ಹಾನಿ ಪರಿಹಾರ (Crop Insurance ) ಮತ್ತು ಜಮೆಯಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ನೋಂದಣಿಯಾದ 25 ಲಕ್ಷ ರೈತರಲ್ಲಿ ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ( Crop Insurance) ಮೊತ್ತ ಜಮೆಯಾಗಿದ್ದು, ಇನ್ನುಳಿದಂತೆ 800 ಕೋಟಿ ಪರಿಹಾರವನ್ನು ಸಧ್ಯದಲ್ಲಿಯೇ 13 ಲಕ್ಷ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವನಾರಾಯಣಸ್ವಾಮಿ ರವರು ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ.
ಹೌದು ನಿಮಗೆಲ್ಲರಿಗೂ ಗೊತ್ತೇ ಇರುವಂತೆ ಫಸಲ್ ಭೀಮಾ ಯೋಜನೆ (fasal bima yojana ) ಅಡಿಯಲ್ಲಿ ಕರ್ನಾಟಕ ರಾಜ್ಯದ ಹೆಚ್ಚಿನ ರೈತರ ನೊಂದಾಯಿಸಿಕೊಂಡಿದ್ದು, ಈ ಯೋಜನೆಯಡಿಯಲ್ಲಿ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕವಾಗಿ ತುಸು ಸಹಾಯ ಸಿಗುತ್ತಿದೆ. ಅಲ್ಲದೆ ರಾಜ್ಯ ಸರ್ಕಾರವು ಕೂಡ ಬರಗಾಲ ಘೋಷಣೆ ಮಾಡಿದ್ದು ಬೆಳೆ ಪರಿಹಾರವಾಗಿ ( Drought Relief ) ಮೊದಲ ಕಂತಾಗಿ 2000 ರೂ. ಗಳನ್ನು ಈಗಾಗಲೇ ರೈತರ ಖಾತೆಗೆ ಬಿಡುಗಡೆ ಮಾಡಿದೆ.
ಈ ವರ್ಷ ಮಳೆಯೂ ಯಾವ ರೀತಿ ಜುಜಾಟವಾಡಿದೆಂದರೆ ಮೊದಲ ತಿಂಗಳಿನಲ್ಲಿ ಮಳೆಯ ಇರಲಿಲ್ಲ ಆದರೆ ಒಮ್ಮೆಲೆ ಶುರುವಾದ ಮಳೆ ಬಿತ್ತಿದ ಬೆಳೆಯನ್ನು ನಾಶ ಮಾಡಿದ್ದು ನಂತರ ಮಳೆಯ ಸದ್ದು ಕಾಣಿಸಲೇ ಇಲ್ಲ. ಹೀಗಾಗಿ ಯಾವುದೇ ಬೆಳೆ ಹಾಕಿದ ರೈತರಿಗೂ ಕೂಡ ಇಳುವರಿ ಕೈಗೆ ಬಂದಿಲ್ಲ. ಆದ್ದರಿಂದ ರೈತರು ಸಂಕಷ್ಟದಲ್ಲಿದ್ದು ಆರ್ಥಿಕವಾಗಿ ಸಹಕಾರಿಯಾಗುವಂತೆ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಇದರಿಂದ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ವಿಮಾ ಕಂಪನಿಯೊಂದಿಗೆ ಮಾತನಾಡಿ, ಮಧ್ಯಂತರ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಂಡಿತು.
ಪ್ರಸ್ತುತವಾಗಿ ಮಧ್ಯಂತರ ಬೆಳೆ ಪರಿಹಾರ ( Crop Insurance) ಬಗ್ಗೆ ಶೇಕಡ 25ರಷ್ಟನ್ನು ರೈತರಿಗೆ ಖಾತೆಗೆ ಜಮೆ ಮಾಡಲಾಗಿದ್ದು ಉಳಿದ 75% ಅನ್ನು ಮಾರ್ಚ್ ತಿಂಗಳ 31ರ ಒಳಗಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದೆಂದು ಕೃಷಿ ಸಚಿವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ (fasal bima yojana ) 2023ರ ಮುಂಗಾರು ( Kharif ) ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಬೆಳೆ ಕಟಾವು ಪ್ರಯೋಗಗಳ ಅಂತಿಮ ಇಳುವರಿ ಆಧಾರದ ಮೇಲೆ ಇಳುವರಿ ಕೊರತೆಗಣುಗುಣವಾಗಿ ಬೆಳೆ ವಿಮೆ ಪರಿಹಾರ ಲೆಕ್ಕಚಾರ ಮಾಡಿ ವಿಮಾ ಸಂಸ್ಥೆಯವರಿಂದ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ನಿಮಗೂ ಬೆಳೆ ಪರಿಹಾರ ( Crop Insurance) ಮೊತ್ತ ಬಂದಿದ್ದರೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಿಮಗೂ ಬೆಳೆ ಪರಿಹಾರ ( Crop Insurance) ಮೊತ್ತ ಬಂದಿದೆಯಾ ಎಂದು ಸ್ಟೇಟಸ್ ಚೆಕ್ ಮಾಡಲು ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
*ಆಗ ಒಂದು ವೆಬ್ಸೈಟ್ ಓಪನ್ ಆಗುತ್ತದೆ, ಅಲ್ಲಿ
ನಂತರ ವರ್ಷದ ಆಯ್ಕೆ 2023-24 ಮತ್ತು ಋುತು kharif ಎಂದು ಆಯ್ಕೆ ಮಾಡಿ ನಂತರ Go ಮೇಲೆ ಕ್ಲಿಕ್ ಮಾಡಿ
*ನಂತರ ಕೆಳಗಡೆ Farmer ಎಂಬ ಆಯ್ಕೆ ಇದ್ದು, ಅದರ ಕೆಳಗಡೆ Check status ಎಂಬ ಆಯ್ಕೆ ಇದೆ. ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಓಪನ್ ಆಗುವ ಪೇಜ್ ನಲ್ಲಿ ನೀವು Proposal number ಅಥವಾ Mobile number ಅಥವಾ ಆಧಾರ ನಂಬರ್ ಹಾಕುವ ಮೂಲಕ ಸ್ಟೇಟಸ್ ಚೆಕ್ ಮಾಡಬಹುದಾಗಿದ್ದು, ನಿಮಗೆ ಅನುಕೂಲವಾಗುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ,
*ನಂತರ ಬೆಳೆ ವಿಮೆ(Crop insurance) ಕಟ್ಟಿದ
Acknowledgment number ಹಾಕಿ, ಕೊಟ್ಟಿರುವ Captcha ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಿ. ಬೆಳೆವಿಮೆ ಕಟ್ಟಿದ ರಶೀದಿಯಲ್ಲಿ 6 ಸಂಖ್ಯೆಯ acknowledgment number ಇರುತ್ತದೆ. ಅದನ್ನು ಇಲ್ಲಿ ಹಾಕಬೇಕು.
*ಆಗ ನಿಮಗೆ ನೀವು ಬೆಳೆ ವಿಮೆ ಮಾಹಿತಿ ಸಿಗುತ್ತದೆ. *ಅದರ ಕೊನೆಯಲ್ಲಿ ಸೆಲೆಕ್ಟ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ಬೆಳೆವಿಮೆ ಕಂಪನಿಗೆ ನಿಮ್ಮ ಅರ್ಜಿ ಸಲ್ಲಿಕೆಯಿಗಿದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ. ಹಾಗೂ ನಿಮಗೆ ಬೆಳೆ ಹೈನಿ ಪರಿಹಾರ ಮೊತ್ತ ಬಂದಿದ್ದರೆ ಅದರ ಮಾಹಿತಿಯು ಸಿಗುತ್ತದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ