Solar :: ಕೇಂದ್ರದಿಂದ ಉಚಿತ ವಿದ್ಯುತ್! ಸೂರ್ಯ ಘರ್ ಯೋಜನೆಯಲ್ಲಿ ಉಚಿತ ಯೋಜನೆ ಹಾಗೂ ಆದಾಯ ಕೂಡ ಗಳಿಸಬಹುದು!
ಕೇಂದ್ರ ಸರ್ಕಾರದಿಂದ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆಯೊಂದನ್ನು ರೂಪಿಸಲಾಗಿದ್ದು, ಇಂದು ಈ ಯೋಜನೆಯನ್ನು ಘೋಷಿಸಲಾಗಿದೆ. ಹೌದು ಈ ಯೋಜನೆಯ ಮೂಲಕ ದೇಶದ ಒಂದು ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ವಿದ್ಯುತ್ ಹೊರೆಯನ್ನು ತಪ್ಪಿಸಲು ಸಾವ೯ಜನಿಕರಿಗೆ ನೆರವಾಗಲಿದೆ.
ಈ ಮಹತ್ವದ ಯೋಜನೆಯೇ ಪ್ರಧಾನಮತ್ರಿ ಸೂರ್ಯ ಘರ್ ಯೋಜನೆ. ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ಕುಟುಂಬಗಳಿಗೆ ಅನುಕೂಲವಾಗುವಂತೆ 75,000 ಕೋಟಿ ಮೌಲ್ಯದ ರೂಫ್ ಟಾಫ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಇದೇ ಗುರುವಾರದಂದು ಅನುಮೋದಿಸಿದೆ. ಈ ಮೂಲಕ ದೇಶದ ನಾಗರಿಕರಿಗೆ ಇನ್ನು ಮುಂದೆ ಉಚಿತ ವಿದ್ಯುತ್ ನೀಡುವ ಶಪಥ ಮಾಡಿದೆ.
ಈ ಯೋಜನೆಯನ್ನು ಸೂರ್ಯ ಘರ್ ಮುಫ್ತಿ ಬಿಜ್ಲಿ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ 1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದು, ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.
ಇದು ಒಂದು ಉಚಿತ ಯೋಜನೆಯಾದರೂ ಕೂಡ ಉತ್ತಮ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ಉಚಿತ ವಿದ್ಯುತ್ ನೀಡಿ ಸಕಾ೯ರದ ಬೊಕ್ಕಸಕ್ಕೆ ನಷ್ಟ ಮಾಡಿಕೊಂಡು ಸಾವ೯ಜನಿಕರನ್ನು ಓಲೈಸಿಕೊಂಡು ಚುನಾವಣೆಯಲ್ಲಿ ಗೆಲ್ಲುವ ಹುನ್ನಾರವಿಲ್ಲ. ಈ ಯೋಜನೆಯು ಸೌರ ವಿದ್ಯುತ್ ನೀಡುವ ಯೋಜನೆಯಾಗಿದ್ದು, ಈ ಯೋಜನೆಯಿಂದ ಪರಿಸರವನ್ನು ಉತ್ತಮಗೊಳಿಸುತ್ತದೆ. ರಿನಿವೆಬಲ್ ಎನಜಿ೯ಯನ್ನು ಬಳಸಿ ವಿದ್ಯುತ್ ಉತ್ಪಾದಿಸುವುದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಹಾಗೂ ಕಾಬ೯ನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಈ ಯೋಜನೆ ಬಹಳಷ್ಟು ಸಹಕಾರಿಯಾಗಲಿದೆ.
ಅಲ್ಲದೇ ಮುಖ್ಯವಾಗಿ ಈ ಯೋಜನೆಯಿಂದ ವಿದ್ಯುತ್ ಉತ್ಪಾದನೆ, ಸಾಗಣೆ, ಪೂರೈಕೆ ಸರಪಳಿ, ಮಾರಾಟ, ಸ್ಥಾಪನೆ ಮತ್ತು ಇತರ ಸೇವೆಗಳಲ್ಲಿ ಭಾಗಿಯಾಗುವುದರಿಂದ ಸುಮಾರು 17 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಅಸಂಖ್ಯಾತ ಉದ್ಯೋಗಗಳು ಪರೋಕ್ಷವಾಗಿ ಸೃಷ್ಟಿಯಾಗಬಹುದು ಎನ್ನಲಾಗಿದೆ.
ಸಬ್ಸಿಡಿ ಮೊತ್ತವೆಷ್ಟು?
ಕೇಂದ್ರ ಸರ್ಕಾರ ಘೋಷಿಸಿದಂತೆ, 75,021 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಟಾವಣಿಯ ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸುವ ಈ ಯೋಜನೆಯು ಪ್ರತಿ ಕುಟುಂಬಕ್ಕೆ 1 kW ಸಿಸ್ಟಮ್‌ಗೆ ₹ 30,000, 2 kW ಸಿಸ್ಟಮ್ ಗೆ ₹ 60,000 $ 3 kW ಅಥವಾ ಹೆಚ್ಚಿನ ಸಿಸ್ಟಮ್‌ಗಳಿಗೆ ₹ 78,000 ಕೇಂದ್ರ ಹಣಕಾಸು ನೆರವು ನೀಡಲು ಉದ್ದೇಶಿಸಲಾಗಿದೆ.
ಈ ಯೋಜನೆಯನ್ನು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾಯ೯ರೂಪಕ್ಕೆ ತರಲು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಚಾವಣಿ ಸೌರಶಕ್ತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಕೂಡ ಮಾಡಬಹುದಾಗಿದೆ. ಇದರಿಂದ ಪ್ರತಿ ಕುಟುಂಬಕ್ಕೆ ವಿದ್ಯುತ್ ಹೊರೆಯನ್ನು ತಪ್ಪಿಸುವುದಲ್ಲದೆ ಆರ್ಥಿಕವಾಗಿ ಸಹಾಯ ಮಾಡುವ ಗುರಿ ಹೊಂದಿದೆ.
ಅಲ್ಲದೆ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ, ಅಲ್ಲಿ ಸರ್ಕಾರವೇ ಸೌರ ವಿದ್ಯುತ್ ಶಕ್ತಿಯನ್ನು ಅಳವಡಿಸಿ ಆ ಗ್ರಾಮವನ್ನು ಅಭಿವೃದ್ಧಿಪಡಿಸುತ್ತದೆ ಈ ಗ್ರಾಮವು ಉಳಿದ ಎಲ್ಲಾ ಗ್ರಾಮಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಯೋಜನೆಯು ದೇಶದ ನಾಗರಿಕರಿಗೆ ಸಹಾಯ ಮಾಡುವುದಲ್ಲದೆ ಗ್ಲೋಬಲ್ ವಾರ್ಮಿಂಗ್ ಕಡಿಮೆ ಮಾಡಲು ಹವಮಾನ ಪರಿಸ್ಥಿತಿಯನ್ನು ಸುಧಾರಿಸಲು ದೇಶದ ಕೊಡುಗೆಯನ್ನು ನೀಡಬೇಕಾದ ಅನಿವಾರ್ಯತೆ ಇದ್ದು ಅದರಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಯೋಜನೆಯ ಉಪಯೋಗಗಳೇನು?
* ಈ ಯೋಜನೆ ಅಡಿಯಲ್ಲಿ ಸೌರ ವಿದ್ಯುತ್ತನ್ನು ಕುಟುಂಬಗಳೇ ಉತ್ಪಾದಿಸುವುದರಿಂದ ವಿದ್ಯುತ್ ಬಿಲ್ ಬರುವುದಿಲ್ಲ ಅಥವಾ ಕಡಿಮೆ ಬರುತ್ತದೆ. ಇದರಿಂದ ಕುಟುಂಬಕ್ಕೆ ಆಥಿ೯ಕವಾಗಿ ಉಳಿತಾಯವಾಗುತ್ತದೆ.
*ಹೆಚ್ಚಿಗೆ ಉತ್ಪಾದಿಸಿದ ವಿದ್ಯುತ್ ನ್ನು ವಿದ್ಯುತ್ ಮಂಡಳಿಗೆ ಮಾರಾಟ ಮಾಡಬಹುದಾಗಿದ್ದು, ಇದರಿಂದ ಆದಾಯ ಕೂಡ ಗಳಿಸಬಹುದು.
* ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವುದರಿಂದ ಕಾರ್ಬನ್ ಡೈಯಾಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ, ಗ್ಲೋಬಲ್ ವಾಮಿ೯ಂಗ್ ತಗ್ಗಿಸಲು ಸಹಕಾರಿಯಾಗಿದೆ.
* ಈ ಯೋಜನೆಯಿಂದ ನೇರವಾಗಿ 17 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆ ಅಡಿಯಲ್ಲಿ ಅಜಿ೯ ಸಲ್ಲಿಸಲು ಅದಿಕೃತ ರಾಷ್ಟ್ರೀಯ ಪೋರ್ಟಲ್ ಗೆ ಭೇಟಿ ನೀಡಬೇಕಾಗಿದ್ದು, ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmsuryaghar.gov.in/ ಗೆ
* ಅಲ್ಲಿ ಕೇಳಲಾದ ವಿವರಗಳನ್ನು ಹಾಕಿ
*ಮೇಲ್ಟಾವಣಿಯ ಸೌರಶಕ್ತಿಯನ್ನು ಸ್ಥಾಪಿಸಲು ಸೂಕ್ತವಾದ ಮಾರಾಟಗಾರರನ್ನು ಕೂಡ ನೀವೇ ಆಯ್ಕೆ ಮಾಡಬಹುದು.
*ಈ ಯೋಜನೆ ಅಡಿಯಲ್ಲಿ ನೀವು 7% ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯುವ ಅವಕಾಶವನ್ನನ ಸಹ ನೀಡಲಾಗಿದ್ದು, ಅದರ ಪ್ರಯೋಜನ ಕೂಡ ಪಡೆಯಬಹುದು.
*ಅಲ್ಲದೇ ಈ ಯೋಜನೆಯಲ್ಲಿ ನೀಡುವ ಸಬ್ಸಿಡಿಗಳನ್ನು ಯಾವುದೇ ಮಧ್ಯವತಿ೯ಗಳಿಗೆ ಅವಕಾಶ ನೀಡದೇ ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ಯೋಜನೆಯಿಂದ ಜನರ ಮೇಲೆ ಯಾವುದೇ ಹೆಚ್ಚುವರಿ ವೆಚ್ಚದ ಹೊರೆ ಉಂಟುಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಖಚಿತಪಡಿಸಿಕೊಳ್ಳುತ್ತದೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಎಂದು ಭರವಸೆ ನೀಡಿದ್ದಾರೆ.
ನೀವು ಕೂಡ ಪರಿಸರಕ್ಕೆ ಹಾನಿ ಮಾಡದೇ ನಿಮ್ಮ ಮನೆಗಳ ಮೇಲೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸಿ, ಹೆಚ್ಚುವರಿ ವಿದ್ಯುತ್ ನ್ನು ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು. ಇದರಿಂದ ಗ್ಲೋಬಲ್ ವಾಮಿ೯ಂಗ್ ಕಡಿಮೆ ಮಾಡಲು ಕೂಡ ಸಹಕಾರಿಯಾಗುತ್ತದೆ. ಇತ್ತೀಚಿನ ವಷ೯ಗಳಲ್ಲಿ ಗ್ಲೋಬಲ್ ವಾಮಿ೯ಂಗ್ ಹೆಚ್ಚಾಗಿ ಸಾಕಷ್ಟು ತೊಂದರೆಗಳಾಗುತ್ತಿದ್ದು, ಮನುಕುಲಕ್ಕೆ ಕಂಟಕವಾಗಿದೆ. ಆದ್ದರಿಂದ ಸಕಾ೯ರವು ಇಂತಹ ಯೋಜನೆಗಳನ್ನು ಜಾರಿಗೆ ತರುವ ಅನಿವಾಯ೯ತೆ ಇದ್ದು, ಜವಾಬ್ದಾರಿಯುತ ನಾಗರಿಕರಾದ ನಾವುಗಳು ಇಂತಹ ಯೋಜನೆಗಳಿಗೆ ಸಪೋಟ್೯ ಮಾಡಬೇಕಾಗಿದೆ. ಆದ್ದರಿಂದ ನೀವು ಕೂಡ ಬೇಗ ಅಜಿ೯ ಸಲ್ಲಿಸಿ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ