Arecanut Import :: ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ಆಮದು! ಆತಂಕದಲ್ಲಿ ಅಡಕೆ ಬೆಳೆಗಾರರು!
ದೇಶದಲ್ಲಿ ಅಡಿಕೆ ಕೊಯ್ಲು ಮುಗಿದಿದ್ದು ಅಡಿಕೆ(arecanut) ಮಾರಾಟ ಹಂಗಾಮು ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಶ್ರೀಲಂಕಾದಿಂದ ದೊಡ್ಡಮಟ್ಟದಲ್ಲಿ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದು ಇದರಿಂದ ಅಡಿಕೆ ಬೆಳೆಗಾರರು ಚಿಂತೆಗೊಳಗಾಗಿದ್ದಾರೆ. ಈಗಾಗಲೇ ಅಡಿಕೆ ಮಾರಾಟ ಪ್ರಾರಂಭವಾದಾಗಿನಿಂದ ಬೆಲೆ ಇಳಿಕೆಯಾಗುತ್ತಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿತ್ತು. ಅದು ಸ್ವಲ್ಪಮಟ್ಟಿಗೆ ನಿಂತು ಬೆಲೆಯಲ್ಲಿ ಏರಿಕೆ ಕಾಣುತ್ತಿದೆ ಎನ್ನುತ್ತಿರುವಾಗಲೇ ಇದೀಗ ಮತ್ತೇ ಹೊರದೇಶದಿಂದ ಅಡಿಕೆ ಆಮದಾಗುತ್ತಿರುವುದನ್ನು ಕೇಳಿ ರೈತರಿಗೆ ಶಾಕ್ ಆಗಿದೆ.
ಬ್ರಿಟನ್ ಕಂಪನಿ(Britain company) ಒಪ್ಪಂದ!
ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ( Arecanut ) ಆಮದು ಮಾಡಿಕೊಳ್ಳಲು ದೇಶದ ಮುಖ್ಯ ಕಂಪನಿಯೊಂದು ಮುಂದಾಗಿದ್ದು, ಇದರಿಂದ ದೇಶದ ಮಾರುಕಟ್ಟೆಯಲ್ಲಿ ಲೋಕಲ್ ಅಡಿಕೆ ಬೆಲೆ ಇಳಿಕೆಯಾಗಬಹುದು ಎನ್ನುವ ಆತಂಕದಲ್ಲಿದ್ದಾರೆ. ಅಂದಹಾಗೆ
ಶ್ರೀಲಂಕಾದಿಂದ ಅಡಿಕೆ ಮಾಡಿಕೊಳ್ಳುತ್ತಿರುವ ಕಂಪನಿ ಹೆಸರು ಬ್ರಿಟನ್ ಮೂಲದ ಎಸ್‌ರಾಂ ಅಂಡ್ ಎಂರಾಂ ಗ್ರೂಪ್(Sram & Nram group). ಈ ಸಂಸ್ಥೆಯು ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್(prime star private limited) ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿದ್ದು, ಅದನ್ನು ಸ್ವತಃ ಕಂಪನಿಯೇ ಶುಕ್ರವಾರ ಘೋಷಿಸಿದೆ.
ಆಮದು ಮಾಡಿಕೊಳ್ಳುವ ಪ್ರಕ್ರಿಯೆ ದೇಶದಲ್ಲಿ ಪ್ರತಿವಷ೯ ನಡೆಯುತ್ತದೆ. ಇದು ಹೊಸತೇನಲ್ಲ. ಆದರೆ ದೇಶದಲ್ಲಿ ಇದೀಗ ತಾನೆ ಅಡಿಕೆ ಕೊಯ್ದು ಮುಗಿದಿದ್ದು, ಇಲ್ಲಿಯೇ ಅಡಿಕೆ ಲಭ್ಯವಿರುವಾಗ ಹೊರದೇಶದಿಂದ ಅಡಕೆ ಆಮದು ಮಾಡಿಕೊಂಡರೆ ದೇಶದಲ್ಲಿ ಬೆಳೆದ ಅಡಿಕೆಯ ಬೆಲೆಯ ಮೇಲೆ ಭಾರೀ ಹೊಡೆತ ಬೀಳುತ್ತದೆ. ಇದರಿಂದ ಇಲ್ಲಿನ ರೈತರಿಗೆ ನಷ್ಟವಾಗುತ್ತದೆ. 2022ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರು. ಮೌಲ್ಯದ ಅಡಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಇದು 4.04 ಕೋಟಿ ರು.ಗೆ ಕುಸಿದಿತ್ತು. ಆದ್ದರಿಂದ ರಾಜ್ಯದ ರೈತರಿಗೆ ಈ ಬಾರಿಯು ಆಮದು ಪ್ರಮಾಣ ಹೆಚ್ಚು ಕಡಿಮೆ ಅಷ್ಟೇ ಇರಲಿದ್ದು, ಅಡಿಕೆ ದರ ಏರಿಕೆ ಆಗಲಿದೆ ಎಂದುಕೊಂಡಿದ್ದರು.
ಆಮದು ಪ್ರಮಾಣ ಇನ್ನು ಹೆಚ್ಚಾದರೆ ಕಷ್ಟ!
ಆದರೆ ಇದೀಗ ಶ್ರೀಲಂಕಾದಿಂದ ಒಂದೇ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದಿಗೆ ಬ್ರಿಟನ್ ಕಂಪನಿ ಮುಂದಾಗಿದೆ. ಇದರಿಂದ ಸಹಜವಾಗಿಯೇ ಅಡಕೆ ಬೆಳೆಗಾರರು ಕಂಗಾಲಾಗಿದ್ದು, ಬೇರೆ ಕಂಪನಿಗಳು ಕೂಡ ಸ್ವಲ್ಪ ಮಟ್ಟಿಗೆ ಆಮದಿಗೆ ಮುಂದಾದರೂ ಕೂಡ ಆಮದು ಪ್ರಮಾಣ ಇನ್ನು ಹೆಚ್ಚಾಗಿ ನಮ್ಮ ಅಡಕೆಗೆ ಬೇಡಿಕೆ ಕಡಿಮೆಯಾಗಿ ದರ ಇಳಿಕೆಯಾಗುತ್ತದೆ ಎನ್ನುವ ಭಯದಲ್ಲಿದ್ದಾರೆ.
ಆದ್ದರಿಂದ ಹೊರದೇಶದಿಂದ ಅಡಿಕೆ ಆಮದಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ನಮ್ಮ ರೈತರಿಗೆ ಅನುಕೂಲವಾಗುವಂತೆ ದರ ನಿಗದಿಪಡಿಸಬೇಕು ಎಂದು ರೈತರು ಕೇಂದ್ರ ಸಕಾ೯ರವನ್ನು ಒತ್ತಾಯಿಸುತ್ತಿದ್ದಾರೆ. ಹೀಗೆ ಆಮದು ಮಾಡಿಕೊಳ್ಳುತ್ತಿದ್ದರೆ ಕಡಿಮೆ ಗುಣಮಟ್ಟದ ಅಡಿಕೆಯನ್ನು ಹೊರದೇಶದಿಂದ ತಂದು ನಮ್ಮಲ್ಲಿನ ಉತ್ತಮ ಅಡಿಕೆಗೆ ಬೆರೆಸಿ ವತ೯ಕರು ಬೆಲೆ ಇಳಿಕೆಯಾಗುವಂತೆ ಮಾಡುತ್ತಾರೆ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಅನ್ಯಾಯವಾಗುತ್ತದೆ
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ