ಅಡಿಕೆ ಬೆಳೆಗಾರರು ಗಮನಿಸಲೇಬೇಕಾದ ಮಾಹಿತಿ..!!!! ಬತ್ತಿದ ಅಂತರ್ಜಲ – ಆತಂಕದಲ್ಲಿ ಅಡಿಕೆ ಬೆಳೆಗಾರರು..!!!!
ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರ,, ನಮ್ಮೆಲ್ಲರಿಗೂ ತಿಳಿದಿರುವಂತೆ ಈ ವರ್ಷ ಮುಂಗಾರು ಕೈಕೊಟ್ಟಿದೆ. ಈ ವರ್ಷ ಸರಾಸರಿ ಶೇಕಡ 40ರಷ್ಟು ಮಳೆಯ ಕೊರತೆ ಯಾಗಿರುವುದರಿಂದ ಜಲಾಶಯಗಳಲ್ಲಿ ನೀರು ಸಹ ಕಡಿಮೆಯಾಗಿದೆ ಮತ್ತು ಅಂತರ್ಜಲಗಳು ಎಲ್ಲಾ ಬತ್ತಿ ಹೋಗುತ್ತಿವೆ. ಇದರಿಂದ ರಾಜ್ಯದಲ್ಲೆಡೆ ಬರಗಾಲದ ಛಾಯೆ ಮೂಡಿದೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ 161 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ತೋಟದ ರೈತರಲ್ಲಿ ಬೆಳೆ ನಿರ್ವಹಣೆ ಬಗ್ಗೆ ಆತಂಕವಿರುತ್ತದೆ.
ಹಾಗಾಗಿ ಅಡಿಕೆ ಬೆಳೆಯನ್ನು ಮುಂಬರುವ ಹಿಂಗಾರು ಮಳೆಯಿಂದ ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ.
ಸಾಮಾನ್ಯವಾಗಿ ಅಡಿಕೆ ಬೆಳೆಗಳಿಗೆ ಹಿಂಗಾರಿನಲ್ಲಿ ನೀಡುವಂತಹ ಪೋಷಕಾಂಶ ಮುಂದಿನ ವರ್ಷ ಉತ್ತಮ ಇಳುವರಿ ಪಡೆಯಲು ಸಹಾಯಕವಾಗಿರುತ್ತದೆ.
ಹಾಗಾಗಿ ಹಲವು ರೈತರಲ್ಲಿ ಗೊಂದಲವಿರುವುದು ಏನೆಂದರೆ, ಮಳೆಯ ಕೊರತೆಯಿಂದ ಹಿಂಗಾರು ಪೋಷಕಾಂಶ ನಿರ್ವಹಣೆ ಹೇಗೆ??
* ಈ ನಿಟ್ಟಿನಲ್ಲಿ ಗಮನಿಸುವುದಾದರೆ, ಅಡಿಕೆ ತೋಟಗಳಿಗೆ ನೀಡುವ ಪೋಷಕಾಂಶಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.
ಉದಾಹರಣೆಗೆ:- ಸಾಮಾನ್ಯವಾಗಿ 100ಗ್ರಾಂ ಸಾರಜನಕ 40 ಗ್ರಾಂ ರಂಜಕ 140 ಗ್ರಾಂ ಪೊಟ್ಯಾಶಿಯಂ ನಷ್ಟು ಪೋಷಕಾಂಶವನ್ನು ಒಂದು ಅಡಿಕೆ ಗಿಡಕ್ಕೆ ಒಂದು ವರ್ಷದಲ್ಲಿ ನೀಡಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.
ಹಾಗಾದರೆ ಮಳೆಯ ಕೊರತೆ ಇರುವುದರಿಂದ ಅಡಿಕೆ ಗಿಡಗಳಿಗೆ ಎಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡಬಹುದು??
* ಸಂಯುಕ್ತ ರಾಸಾಯನಿಕ ಗೊಬ್ಬರಗಳಲ್ಲಿ 10:26:26 ಅನ್ನು 150 ಗ್ರಾಂ ಮತ್ತು ಪೊಟ್ಯಾಶ್ 100 ಗ್ರಾಂ ಜೊತೆಗೆ ಲಘು ಪೋಷಕಾಂಶಗಳ ಮಿಶ್ರಣ 50 ಗ್ರಾಂ.ಪೋಷಕಾಂಶಗಳನ್ನು
ಹತ್ತು ವರ್ಷ ಮೇಲ್ಪಟ್ಟ ಅಡಿಕೆ ಗಿಡಗಳಿಗೆ ಒದಗಿಸಿ ಹನಿ ನೀರಾವರಿ ಪದ್ಧತಿಯಿಂದ ಆದಷ್ಟು ನೆಲವನ್ನು ತಂಪಾಗಿಡಬೇಕು, ಈ ರೀತಿ ಮಾಡುವುದರಿಂದ ಮುಂದಿನ ಮುಂಗಾರಿನಲ್ಲಿ ಉತ್ತಮ ಇಳುವರಿ ಸಿಗುತ್ತದೆ ಎಂಬುವುದನ್ನು ನಿರೀಕ್ಷಿಸಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ರಸಾಯನಿಕ ಗೊಬ್ಬರಗಳಿಗಿಂತ ಸಾವಯವ ಗೊಬ್ಬರಗಳನ್ನು ಈ ಸಮಯದಲ್ಲಿ ಉಪಯೋಗಿಸುವುದು ಅತಿ ಸೂಕ್ತ. ಸಾವಯವ ಗೊಬ್ಬರಗಳಿಂದ ಉತ್ತಮ ರೋಗನಿರೋಧಕ ಶಕ್ತಿ ಹೆಚ್ಚುವುದಿಲ್ಲದೆ, ಹವಮಾನ ವೈಪರಿತ್ಯವನ್ನು ತಡೆದುಕೊಳ್ಳುವ ಸಾಮರ್ಥ್ಯವು ಅಡಿಕೆ ಗಿಡಗಳಲ್ಲಿ ಹೆಚ್ಚಾಗುತ್ತದೆ.
ಈ ಕ್ರಮಗಳನ್ನು ಅಡಿಕೆ ಗಿಡಗಳ ಪೋಷಕಾಂಶ ನಿರ್ವಹಣೆಗೆ ಬಳಸಬಹುದು.
ಹಾಗಾದರೆ ಅಂತರ್ಜಾಲದಲ್ಲಿ ಇರುವ ನೀರು ಆವಿಯಾಗದಂತೆ ಕಾಪಾಡುವುದು ಹೇಗೆ??
ಅಂತರ್ಜಾಲ ಮಟ್ಟ ಕುಸಿಯಲು ಪ್ರಮುಖ ಕಾರಣವೆಂದರೆ ವಾತಾವರಣದಲ್ಲಿರುವ ಅಧಿಕ ಉಷ್ಣಾಂಶ. ಹಾಗಾಗಿ ತೋಟದಲ್ಲಿ ಆದಷ್ಟು ಉಷ್ಣಾಂಶವನ್ನು ಕಡಿಮೆ ಮಾಡುವ ಉದ್ದೇಶದಿಂದ ನೆಲ ಹಚ್ಚಹಸಿರಿನಿಂದ ಕೂಡಿರುವ ರೀತಿ ನೋಡಿಕೊಳ್ಳಬೇಕು.
* ಇಲ್ಲಿ ರೈತರು ಹೊದಿಕೆ ವಿಧಾನವನ್ನು ಅನುಸರಿಸಿದರೆ ಅಂತರ್ಜಲದಿಂದ ನೀರು ಆವಿಯಾಗದಂತೆ ನೋಡಿಕೊಳ್ಳಬಹುದು
* ಆದಷ್ಟು ಉಳಿಮೆ ಮಾಡುವುದನ್ನು ಕಡಿಮೆ ಮಾಡಬೇಕು.
* ನೆಲಕ್ಕೆ ಹೊದಿಕೆ ಮಾಡುವ ನೆಪದಲ್ಲಿ ಹಸಿ ಅಡಿಕೆ ಸಿಪ್ಪೆಯನ್ನು ನೆಲಕ್ಕೆ ಹಾಸಿದರೆ ಅಣಬೆ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೊಳೆತಿರುವ ಮತ್ತು ಒಣಗಿರುವ ಅಡಿಕೆ ಸಿಪ್ಪಯನ್ನೇ ಹಾಕಬೇಕು.
* ಅಡಿಕೆ ಬೆಳೆಯಲ್ಲಿ ಪ್ರಮುಖವಾಗಿ ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಅತಿ ಅವಶ್ಯ. ಹೀಗಾಗಿ ರೈತರಲ್ಲಿ ಈ ವಿಷಯದ ಬಗ್ಗೆ ತಿಳುವಳಿಕೆ ಅತ್ಯಗತ್ಯ.
ಈ ಮೇಲಿನ ವಿವರಗಳಿಂದ ಅಡಿಕೆ ಬೆಳೆಗಾರ ರಲ್ಲಿ ಅರಿವು ಮೂಡುವುದಲ್ಲದೆ, ಬರಗಾಲದ ಸ್ಥಿತಿಯಲ್ಲಿ ಉತ್ತಮ ನೀರಿನ ನಿರ್ವಹಣೆ ಜೊತೆಗೆ ಬರುವ ಮುಂಗಾರು ಸಮಯದಲ್ಲಿ ಉತ್ತಮ ಇಳುವರಿ ಮತ್ತು ಲಾಭ ರೈತರ ಪಾಲಿಗೆ ಬರುತ್ತದೆ.
ಧನ್ಯವಾದಗಳು
****** ಅಂತ್ಯ ******
ರೈತರ ಸೇವೆಯಲ್ಲಿ ನಿಮ್ಮ vkkrushi.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ